ಬಾಲರಾಮ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ

134

ಪ್ರಜಾಸ್ತ್ರ ಸುದ್ದಿ

ಅಯೋಧ್ಯೆ: ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದ ಬಳಿಕ, ದೇವಸ್ಥಾನದಿಂದ ಹೊರಗಡೆ ಬಂದ ಪ್ರಧಾನಿ ಮೋದಿ, ಸಾಧು ಸಂತರಿಗೆ ನಮಸ್ಕಾರ ಸಲ್ಲಿಸಿದರು. ನಂತರ ವೇದಿಕೆ ಮೇಲೆ ಆಸೀನರಾದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್ ಎಸ್ಎಸ್ ಸರ್ ಸಂಘಚಾಲಕ ಮೋಹನ್ ಭಾಗವತ್, ಮಂದಿರ ಟ್ರಸ್ಟ್ ನ ಗೋವಿದ್ ಗಿರಿ ಮಹಾರಾಜ್, ರಾಜ್ಯಪಾಲ ಆನಂದಿಬೆನ್ ಪಟೇಲ್ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಪ್ರಧಾನಿ, ಇವತ್ತು ನಮ್ಮ ರಾಮ ಬಂದರು. ಎಲ್ಲರ ಧೈರ್ಯ, ಬಲಿದಾನ, ತ್ಯಾಗ, ತಪಸ್ಸಿನಿಂದ ನಮ್ಮ ರಾಮ ಬಂದರು. ಈ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಧನ್ಯವಾದಗಳು. ಈಗಲೂ ನನ್ನ ದೇಹ, ಮನಸ್ಸು ಕಂಪಿಸುತ್ತೆ. ನಮ್ಮ ರಾಮಲಲ್ಲಾ ಈಗ ಟೆಂಟ್ ನಲ್ಲಿ ಇರಲ್ಲ. ಭವ್ಯ ಮಂದಿರನಲ್ಲಿದ್ದಾನೆ. ಈ ನಗರ, ಪರಿಸರ, ವಾತಾವರಣ, ಸಮಯ ಎಲ್ಲದ ಮೇಲೆ ಶ್ರೀರಾಮನ ಆಶೀರ್ವಾದ. ಇವತ್ತಿನ ತಾರೀಕ ಬರೀ ದಿನವಲ್ಲ. ಹೊಸ ಕಾಲ ಚಕ್ರಕ್ಕೆ ಆರಂಭ ಎಂದರು.

ರಾಮ ಮಂದಿರ ಶಂಕು ಸ್ಥಾಪನೆ ದಿನದಿಂದ ಹಿಡಿದು ಪ್ರತಿದಿನ ದೇಶವಾಸಿಗಳಲ್ಲಿ ವಿಶ್ವಾಸ ಮೂಡುತ್ತಾ ಬಂದಿದೆ. ಗುಲಾಮಿ ಮನಸ್ಥಿತಿ ಒಡೆದು, ನವ ಇತಿಹಾಸ ನಿರ್ಮಾಣವಾಗಿದೆ. ಸಾವಿರ ವರ್ಷ ಕಳೆದ ಬಳಿಕವೂ ಈ ತಾರೀಕ, ಕ್ಷಣದ ಬಗ್ಗೆ ಚರ್ಚಿಸುತ್ತಾರೆ. ಈ ಸಮಯ ಸಾಮಾನ್ಯವಾದದಲ್ಲ. ಸರ್ವಕಾಲಕ್ಕೂ ಹೊಸತಾಗಿದೆ. ರಾಮನ ಕೆಲಸವಾದ ಬಳಿಕ ಹನುಮಾನ ಕೆಲಸವೂ ಇರುತ್ತೆ. ಹೀಗಾಗಿ ಹನುಮಾನ, ಜಾನಕಿ, ಲಕ್ಷ್ಮಣ, ಭರತ, ಶತ್ರುಘ್ನ ಅವರೆಲ್ಲರಿಗೂ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಈಗ ರಾಮನಲ್ಲಿಯೂ ನಾನು ಕ್ಷಮೆ ಕೇಳುತ್ತೇನೆ. ಇಷ್ಟು ವರ್ಷತನಕ, ತ್ಯಾಗದ ಬಳಿಕವೂ ಕಾರ್ಯವಾಗದೆ ಇರುವುದಕ್ಕೆ ಕ್ಷಮೆ ಕೇಳುತ್ತೇನೆ.

ತ್ರೇತಾಯುಗದಲ್ಲಿಯೂ ರಾಮ ಬಂದಾಗ ಇಡೀ ಅಯೋಧ್ಯೆಯಲ್ಲಿ ಸಂಭ್ರಮವಿತ್ತು. 14 ವರ್ಷಗಳ ವನವಾಸದ ಬಳಿಕ ಬಂದ ರಾಮನಿಗೆ ಭವ್ಯ ಸ್ವಾಗತ ಸಿಗುತ್ತೆ. ಸಂವಿಧಾನದ ಮೊದಲ ಪುಟದಲ್ಲಿಯೂ ರಾಮ ಇದ್ದಾನೆ. ರಾಮನ ಅಸ್ಥಿತ್ವಕ್ಕಾಗಿ ಕಾನೂನು ಹೋರಾಟ ನಡೆಸಬೇಕಾಯಿತು. ನ್ಯಾಯಬದ್ಧವಾಗಿ ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಇವತ್ತು ಇಡೀ ದೇಶ ದೀಪಾವಳಿ ಆಚರಿಸಲಾಗುತ್ತಿದೆ. ಪ್ರತಿ ಮನೆಯಲ್ಲಿ ರಾಮಜ್ಯೋತಿ ಬೆಳಗಿಸಲಾಗುತ್ತಿದೆ. ರಾಮ ಬೆಂಕಿ ಅಲ್ಲ. ಬೆಳಕು. ರಾಮ ವಿವಾದ ಅಲ್ಲ. ಸಮಾಧಾನ. ರಾಮ ನಮ್ಮವನು ಮಾತ್ರವಲ್ಲ. ಎಲ್ಲರವನು. ರಾಮ ವರ್ತಮಾನ ಅಲ್ಲ ಅನಂತಕಾಲ ಅಂತಾ ಹೇಳಿದರು.

ಸಿಎಂ ಯೋಗಿ ಆದಿತ್ಯನಾಥ್, ಮಂದಿರ ಟ್ರಸ್ಟಿ ಗೋವಿಂದ್ ಗಿರಿ ಮಹಾರಾಜ್, ಆರ್ ಎಸ್ಎಸ್ ಸರ್ ಸಂಘಚಾಲಕ ಮೋಹನ್ ಭಾಗವತ್ ಮಾತನಾಡಿದರು. ಪ್ರಧಾನಿ ಮೋದಿ ಹಾಗೂ ಮೋಹನ್ ಭಾಗವತ್ ಅವರಿಗೆ ಉತ್ತರ ಪ್ರದೇಶ ಸರ್ಕಾರದ ವತಿಯಿಂದ ರಾಮ ಮಂದಿರ ಸ್ವರೂಪದ ಉಡುಗಡೆ ನೀಡಲಾಯಿತು.




Leave a Reply

Your email address will not be published. Required fields are marked *

error: Content is protected !!