ಅಸಹ್ಯ ಮೂಡಿಸುತ್ತಿರುವ ರಾಜಕಾರಣಿಗಳ ಮಾತುಗಳು…!

325

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ಒಂದು ಕಾಲದಲ್ಲಿ ರಾಜಕಾರಣ ಅಂದರೆ ಜನರ ಸೇವೆ ಮಾಡಲು ಸಿಕ್ಕ ಒಂದು ಅವಕಾಶ ಎನ್ನುತ್ತಿದ್ದರು. ಹೀಗಾಗಿ ಖಾಸಗಿ ಹಾಗೂ ಸಾರ್ವಜನಿಕ ಜೀವನದಲ್ಲಿ ತುಂಬಾ ಶಿಸ್ತು, ಸಭ್ಯತೆಯಿಂದ ನಡೆದುಕೊಂಡ ಹಲವು ರಾಜಕಾರಣಿಗಳು ಕರ್ನಾಟಕದಲ್ಲಿ ಕಂಡಿದ್ದೇವೆ. ಆದರೆ, ಈಗ ದಿನಗಳು ಕಳೆದಂತೆ ರಾಜಕಾರಣಿಗಳು ಪ್ರಮಾಣಿಕತೆ ಜೊತೆಗೆ ತಮ್ಮ ನಡೆ, ನುಡಿಯನ್ನು ಮರೆತು ವರ್ತಿಸುತ್ತಿರುವುದು ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತಾಗುತ್ತಿದೆ.

ರಾಜಕಾರಣದಲ್ಲಿ ಆರೋಪಗಳು, ಅಸಮಾಧಾನಗಳು, ವೈಮನಸ್ಸುಗಳು ಸಹಜ. ಅದನ್ನು ವ್ಯಕ್ತಪಡಿಸಲು ಕನ್ನಡದಲ್ಲಿ ಸಾಕಷ್ಟು ಪದಗಳಿವೆ. ಅದನ್ನು ಬಿಟ್ಟು ನಾಯಕರುಗಳು ಪಿಂಪ್, ಅಪ್ಪನಿಗೆ ಹುಟ್ಟಿದರೆ, ಬೆತ್ತಲೆ ಮಾಡುತ್ತೇವೆ, ತಲೆ ಹಿಡಿಯುವವರು, ವೇಶ್ಯಯರಂತೆ, ಗಂಡಸ್ತನ ಸೇರಿದಂತೆ ಅತ್ಯಂತ ಅವಾಚ್ಯ ಶಬ್ಧಗಳಿಂದ ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿರುವುದು ನೋಡಿದರೆ, ಇವರು ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೆ ಎನಿಸುತ್ತದೆ.

ಇನ್ನು ಹೀಗೆ ಕೆಟ್ಟ ಪದಗಳನ್ನು ಬಳಕೆ ಮಾಡುವ ರಾಜಕಾರಣಿಗಳು ಒಂದು ಕ್ಷಣ, ತಮ್ಮ ಮನೆ, ಮನೆಯ ಸದಸ್ಯರು, ತಮ್ಮ ಗಮನಿಸುವ ನಾಡಿನ ಜನತೆ ಬಗ್ಗೆ ಯೋಚಿಸಬೇಕಿದೆ. ತಮ್ಮ ವ್ಯಕ್ತಿತ್ವಕ್ಕೂ ಇದು ಶೋಭೆ ತರುತ್ತಾ ಅನ್ನೋದರ ಬಗ್ಗೆಯೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಯಾಕಂದರೆ, ಶಾಸಕ, ಸಚಿವ ಸೇರಿದಂತೆ ಅವರು ಹೊಂದಿರುವ ಸ್ಥಾನಗಳಿಗೆ ಅದರದೆಯಾದ ಗೌರವ ಇರುತ್ತೆ. ಅದನ್ನು ಮರೆತು ಪೋಲಿಗಳು, ರೌಡಿಗಳ ರೀತಿಯಂತೆ ವರ್ತಿಸುತ್ತಿರುವುದು ನಿಜಕ್ಕೂ ದುರಂತ. ಹೀಗೆ ಮಾತನಾಡುವ ನಾಯಕರನ್ನು ದಿಟ್ಟವಾಗಿ ಪ್ರಶ್ನಿಸಬೇಕಾದ ಮಾಧ್ಯಮಗಳು ಅದನ್ನು ಪದೆಪದೆ ತೋರಿಸುವ, ಪ್ರಕಟಿಸುವ ಮಟ್ಟಕ್ಕೆ ಬಂದಿರುವುದು ಸಹ ರಾಜ್ಯದ ಮಾಧ್ಯಮಲೋಕದಲ್ಲಿ ಕೆಟ್ಟ ಮೇಲ್ಪಂಕ್ತಿ ಹಾಕುತ್ತಿರುವುದಕ್ಕೆ ಸಾಕ್ಷಿ.




Leave a Reply

Your email address will not be published. Required fields are marked *

error: Content is protected !!