ರಾಜಕಾರಣಿಗಳಿಗೂ ಸಿಸಿಬಿ ನೋಟಿಸ್ ನೀಡುತ್ತಾ?

493

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಇಬ್ಬರು ನಟಿಯರು ಹಾಗೂ ಡ್ರಗ್ಸ್ ಪೆಡ್ಲರ್ ಗಳ ಬಂಧನವಾಗಿದೆ. ಕೆಲವರ ಬಂಧನಕ್ಕೆ ಬಲೆ ಬೀಸಲಾಗಿದೆ. ಇದೀಗ ನಟ ದಿಗಂತ ಹಾಗೂ ನಟಿ ಐಂದ್ರಿತಾ ದಂಪತಿಯ ವಿಚಾರಣೆ ನಡೆಯುತ್ತಿದೆ.

ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಶೇಕ್ ಫಾಝಿಲ್ ಜೊತೆಗಿರುವ ಫೋಟೋ, ಹಲವು ಕಾರ್ಯಕ್ರಮಗಳಲ್ಲಿ ನಟಿ ಐಂದ್ರಿತಾ ಭಾಗಿಯಾಗಿದ್ರು. ಅಲ್ದೇ, ಅವರ ಮೇಲೆ ಎನ್ ಸಿಬಿ ಹಲವು ದಿನಗಳಿಂದ ನಿಗಾ ವಹಿಸಿದ್ದು ಮಾಹಿತಿ ಕಲೆ ಹಾಕಿದೆಯಂತೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಯಿಂದ ವಿಚಾರಣೆ ನಡೆಸಲಾಗ್ತಿದೆ.

ಆದ್ರೆ, ಶೇಕ್ ಫಾಝಿಲ್ ಜೊತೆ ಶಾಸಕ ಜಮೀರ ಅಹ್ಮದ, ಸಿದ್ದರಾಮಯ್ಯನವರ ಫೋಟೋಗಳಿವೆ. ಡ್ರಗ್ಸ್ ಪೆಡ್ಲರ್ ರಾಹುಲ ಜೊತೆ ಸಚಿವ ಆರ್.ಅಶೋಕ ಹಾಗೂ ಉದ್ಯಮಿ ಪ್ರಶಾಂತ ಸಂಬರಗಿ ಇರುವ ಫೋಟೋಗಳಿವೆ. ಹಾಗಾದ್ರೆ ಇವರಿಗೆ ಸಿಸಿಬಿ ಯಾಕೆ ನೋಟಿಸ್ ನೀಡುತ್ತಿಲ್ಲ. ಇವರನ್ನ ಯಾಕೆ ವಿಚಾರಣೆಗೆ ಕರೆಯುತ್ತಿಲ್ಲ ಅನ್ನೋ ಪ್ರಶ್ನೆ ಮೂಡಿದ್ದು, ಸರ್ಕಾರ ಇವರ ಬೆಂಬಲಕ್ಕೆ ನಿಂತಿದ್ಯಾ ಅನ್ನೋ ಅನುಮಾನ ಮೂಡಿದೆ.

ರಾಜ್ಯ ಸರ್ಕಾರ ಈ ವಿಚಾರದಲ್ಲಿ ಯಾರ ಪರ ನಿಂತಿದೆ ಅನ್ನೋ ಪ್ರಶ್ನೆಯಿದೆ. ತಮ್ಮ ಸಚಿವರ ಜೊತೆ ಡ್ರಗ್ಸ್ ಪೆಡ್ಲರ್ ಇದ್ದಾರೆ ಅನ್ನೋ ಕಾರಣಕ್ಕೆ, ಶೇಕ್ ಫಾಝಿಲ್ ಜೊತೆ ಇರುವ ರಾಜಕೀಯ ನಾಯಕರ ರಕ್ಷಣೆಗೆ ನಿಂತಿದ್ಯಾ? ಇದುವರೆಗೂ ಸಿಸಿಬಿ ಯಾಕೆ ನೋಟಿಸ್ ನೀಡಿಲ್ಲ. ಡ್ರಗ್ಸ್ ಪೆಡ್ಲರ್ ಗಳಿಗೂ, ಪ್ರಮುಖ ಆರೋಪಿ ಫಾಝಿಲ್ ಗೂ ಜಮೀರ ಅಹ್ಮದ, ಸಿದ್ದರಾಮಯ್ಯ, ಸಂಬರಿಗಿ ಅವರಿಗೆ ಏನು ಸಂಬಂಧ? ಸಂಬರಗಿ ರಾಷ್ಟ್ರೀಯವಾದಿ, ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ಬಿಜೆಪಿ ಪರ ಇರುವುದಕ್ಕಾ ಇನ್ನೂ ಮಾಧ್ಯಮಗಳಲ್ಲಿ ಮಾತ್ನಾಡಲು ಬಿಟ್ಟಿರುವುದು?

ಈ ಸಂಬಂಧ ಸಿಸಿಬಿ ಅಧಿಕಾರಿಗಳು ಯಾಕೆ ಮಾತ್ನಾಡ್ತಿಲ್ಲವೆಂದು ಸಾರ್ವಜನಿಕರು ಕೇಳ್ತಿದ್ದು, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕೂಡಲೇ ತಮ್ಮ ನಿಲುವು ಏನು ಅನ್ನೊದು ಸಾಬೀತು ಪಡಿಸಬೇಕಿದೆ. ಇಲ್ಲದೆ ಹೋದ್ರೆ ಡ್ರಗ್ಸ್ ದಂಧೆಯಲ್ಲಿ ಬರೀ ಸಿನಿಮಾ ಮಂದಿ ಇದ್ದಾರೆ. ರಾಜಕಾರಣಿಗಳು ತುಂಬಾ ಕ್ಲೀನ್ ಹ್ಯಾಂಡ್ ಅಂತಾ ತೋರಿಸಿಕೊಳ್ಳುವ ಪ್ರಯತ್ನ ಮಾಡಿದಂತಾಗುತ್ತೆ. ಇದರಲ್ಲಿ ಯಾರೇ ಭಾಗಿಯಾಗಿರ್ಲಿ ಅಂಥವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!