ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಡಾಲಿ ಧನಂಜಯ್ ನಟನೆಯ ಬೈರಾಗಿ ಚಿತ್ರದ ಟ್ರೇಲರ್ ನಿನ್ನೆ ರಿಲೀಸ್ ಮಾಡಲಾಗಿದೆ. ಅಪ್ಪು ಹುಟ್ಟು ಹಬ್ಬದ ನೆನಪಿನಲ್ಲಿ ಗುರುವಾರ ರಿಲೀಸ್ ಟ್ರೇಲರ್ ಧೂಳೆಬ್ಬಿಸುತ್ತಿದೆ.
ಶಿವಣ್ಣನ ಎಂಟ್ರಿ, ಭರ್ಜರಿ ಡೈಲಾಗ್, ಫೈಟ್ ಸ್ಟೈಲ್ ಕಂಡು ಅಭಿಮಾನಿಗಳು ಸೂಪರ್ ಎನ್ನುತ್ತಿದ್ದಾರೆ. ಇನ್ನು ಡಾಲಿ ಧನಂಜಯ್, ಶಶಿಕುಮಾರ್, ಅಂಜಲಿ, ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಎಸ್.ಡಿ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ. ಅನೂಪ್ ಸಿಳೀನ್ ಮ್ಯೂಸಿಕ್ ಇದೆ. ಕೃಷ್ಣ ಸರತಕ್ ನಿರ್ಮಾಣ ಮಾಡಿದ್ದಾರೆ.