ಕರೋನಾ ಭೀತಿ: ಜಾತ್ರೆ ಕೈಬಿಟ್ಟ ಗ್ರಾಮಸ್ಥರು

432

ಮಂಡ್ಯ: ಜಿಲ್ಲೆಯ ಬಸರಾಳು ಹೋಬಳಿ ಗ್ರಾಮದ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ಇಂದು ನಡೆಯಬೇಕಾಗಿದ್ದ ಕಾಲಭೈರವೇಶ್ವರ ಜಾತ್ರೆ ಮತ್ತು ಬೋರೆದೇವರು ಕೊಂಡ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕೊರೋನಾ ವೈರಸ್ ನಿಂದ ಜಾತ್ರೆ ರದ್ದು ಮಾಡಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ತುಂಬಾ ಅದ್ಧೂರಿಯಾಗಿ ಜಾತ್ರೆ ಮಾಡಿಕೊಂಡು ಬರಲಾಗ್ತಿದೆ. ಆದ್ರೆ, ಈ ಬಾರಿ ಕರೋನಾ ವೈರಸ್ ನಿಂದಾಗಿ ಜಾತ್ರೆಯನ್ನ ರದ್ದು ಮಾಡಲಾಗಿದೆ. ಸಾಮೂಹಿಕವಾಗಿ ಜನರು ಸೇರಬಾರದು ಅನ್ನೋ ಕಾರಣಕ್ಕೆ ಊರಿನ ದೇವರ ಜಾತ್ರೆ ರದ್ದು ಮಾಡಿ ಭಕ್ತರಲ್ಲಿ ಮನವಿ ಮಾಡಲಾಗಿದೆ. ಇದರ ಜೊತೆಗೆ ಇಂದು ಜನತಾ ಕರ್ಫ್ಯೂ ಇದ್ರಿಂದ ಬಸರಾಳುವಿನ ಪ್ರತಿಯೊಂದು ರಸ್ತೆಗಳು ಬಿಕೋ ಎನ್ನುತ್ತಿದ್ವು.

ಕರೋನಾ ವೈರಸ್ ವಿರುದ್ಧ ಜನಸಾಮಾನ್ಯರು ಹೆಚ್ಚಿನ ರೀತಿಯಲ್ಲಿ ಜಾಗೃತಿಯನ್ನು ಹೊಂದಿರುವುದು ಇವತ್ತಿನ ದೃಶ್ಯಗಳಿಂದ ತಿಳಿದು ಬಂದಿದೆ. ಕೋವಿಡ್ 19 ವಿರುದ್ಧ ಪ್ರತಿಯೊಬ್ಬರೂ ಸಂಘಟಿತ ಹೋರಾಟ ನಡೆಸುವ ಸಲುವಾಗಿ, ಅದ್ದೂರಿಯಾಗಿ ನಡೆಯಬೇಕಾಗಿದ್ದ ಗ್ರಾಮದಲ್ಲಿ ಜಾತ್ರೆಯನ್ನೇ ಕೈಬಿಟ್ಟಿದ್ದಾರೆ ಗ್ರಾಮಸ್ಥರು ಹೇಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!