ಬ್ರೇಕಿಂಗ್ ನ್ಯೂಸ್: ಸಂಜೆಯಾಗ್ತಿದ್ದಂತೆ ರಸ್ತೆಗಿಳಿದ ಜನತೆ

348

ಬೆಂಗಳೂರು: ಇಡೀ ದಿನ ಮನೆಯಲ್ಲಿದ್ದು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದ ಜನತೆ, ಸಂಜೆಯಾಗ್ತಿದ್ದಂತೆ ರಸ್ತೆಗಿಳಿಯುತ್ತಿದ್ದಾರೆ. ಪ್ರಧಾನಿ ಮೋದಿ ರಾತ್ರಿ 9 ಗಂಟೆಯ ತನಕ ಹೊರ ಬರಬೇಡಿ ಎಂದಿದ್ದಾರೆ. ಆದ್ರೆ, ಜನತೆ ಸಂಜೆಯಾಗ್ತಿದ್ದಂತೆ ಬೀದಿಗಿಳಿದು ಮತ್ತೆ ಜನಜಂಗಳು ನಿರ್ಮಾಣ ಮಾಡ್ತಿದ್ದಾರೆ. ಈ ಮೂಲಕ ಇಡೀ ದಿನ ಆಚರಿಸಿದ ಜನತಾ ಕರ್ಫ್ಯೂ ವ್ಯರ್ಥವಾಗುವಂತೆ ಮಾಡ್ತಿದ್ದಾರೆ.

ರಾಜ್ಯದ ಪ್ರತಿಯೊಂದು ಭಾಗದಲ್ಲಿ ಜನರು ಹೊರ ಬರ್ತಿದ್ದು, ಮತ್ತೆ ಸಾಮೂಹಿಕವಾಗಿ ಕಾಣಿಸಿಕೊಳ್ಳುವ ಮೂಲಕ ಗೃಹಬಂಧನದಲ್ಲಿದ್ದ ಜನತೆ ಹೊರ ಬಂದು ತಿರುಗಾಡ್ತಿದ್ದಾರೆ. ವಾಹನಗಳ ಸಂಚಾರ ಮತ್ತೆ ಶುರುವಾಗಿದೆ. ಈ ಮೂಲಕ ಕರೋನಾ ವಿರುದ್ಧದ ಹೋರಾಟಕ್ಕೆ ನಾವು ಯಾವ ರೀತಿಯಾಗಿ ಬೆಂಬಲ ನೀಡಬೇಕು ಅನ್ನೋದು ಕ್ಷಣದಲ್ಲಿಯೇ ಮರೆಯುತ್ತಿದ್ದಾರೆ.

ಇನ್ನು ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ 12 ಗಂಟೆಯ ತನಕ 144 ಸೆಕ್ಷನ್ ಜಾರಿಯಲ್ಲಿರುತ್ತೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಜನರಿಗೆ ಜನತಾ ಕರ್ಫ್ಯೂ ಬಳಿಕವೂ ರಾತ್ರಿ ವೇಳೆ ಓಡಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಆದ್ರೆ, ಜನರು ಈಗ್ಲೇ ಓಡಾಡು ಶುರು ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!