‘ಶೇ.50ರಷ್ಟು ಸರ್ಕಾರಿ ವೈದ್ಯರು ಪತಿ, ಪತ್ನಿ, ಮಕ್ಕಳ ಹೆಸರಲ್ಲಿ ಆಸ್ಪತ್ರೆ ನಡೆಸುತ್ತಿದ್ದಾರೆ’

492

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸರ್ಕಾರ ಜನರ ಆರೋಗ್ಯ ಸುಧಾರಣೆಗಾಗಿ ಕೋಟ್ಯಾಂತರ ರೂ ಖರ್ಚು ಮಾಡುತ್ತಿದೆ. ಆದರೆ ಅದಾವುದು ಪೂರ್ಣ ಪ್ರಮಾಣದಲ್ಲಿ ಸಫಲವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಲ್ಲಿ ಶೇ 50 ರಷ್ಟು ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಅಂತಹ ದ್ರೋಹಿ ವೈದ್ಯರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಹತೋಟಿಗೆ ಬರದಿದ್ದರೆ ಅಂತಹವರನ್ನು ಕಿತ್ತೊಗೆದಾಗ ಮಾತ್ರ ಆರೋಗ್ಯ ಇಲಾಖೆ ಸುಧಾರಣೆ ಆಗುವುದು ಎಂದು ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಇಂತಹ ವೈದ್ಯರು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದಾರೆ. ಇಗಾಗಲೇ ಕೆಲವು ವೈದ್ಯರು ತಮ್ಮ ಪತಿ, ಪತ್ನಿ, ಮಕ್ಕಳ ಹೆಸರಿನಲ್ಲಿ ಮಲ್ಟಿಸ್ಪೆಷಾಲಿಟಿ ಅಂತಹ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ತೆರೆದು ಅದರ ಮಾಲೀಕ ಮತ್ತು ನಿರ್ದೇಶಕರಾಗಿದ್ದಾರೆ. ಆದರೂ ಸಂಬಳ ಮತ್ತು ಸೌಲಭ್ಯಕ್ಕೊಸ್ಕರ ಹೆಸರಿಗೆ ಸರ್ಕಾರಿ ವೈದ್ಯರು ಎಂಬ ಐಡೆಂಟಿಟಿ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಸಂಬಳ ಪಡೆದು ಸೇವೆ ಮಾಡದೆ ಸರ್ಕಾರ ಮತ್ತು ಜನರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ ಇನ್ನೂರ್ವ ಸದಸ್ಯ ಮಹಾಂತೇಶ ಕವಟಗಿಮಠ ಸರ್ಕಾರಕ್ಕೆ ಉತ್ತರ ಕರ್ಕಾಟಕದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುಸ್ಥಿತಿ ಬಗ್ಗೆ ಸಚಿವರಿಗೆ ಪ್ರಶ್ನೋತ್ತರ ಕಲಾಪದ ವೇಳೆ ಗಮನ ಸೆಳೆದರು.

ಸಾಂಕ್ರಾಮಿಕ ಮತ್ತು ಕೊರೋನಾದಂತಹ ಹೆಮ್ಮಾರಿ ರೋಗಗಳು ಹರಡುತ್ತಿರುವ ಕಾಲದಲ್ಲಿ ಉತ್ತರ ಕರ್ನಾಟಕದ ಹಳ್ಳಿ ಮತ್ತು ತಾಲೂಕು ಆಸ್ಪತ್ರೆಗಳ ಪರಿಸ್ಥಿತಿ ದಯನೀಯವಾಗಿದೆ. ಅಲ್ಲಿನ ಕಟ್ಟಡಗಳು ಶೀತಲಿಗೊಂಡಿವೆ. ಕೆಲವು ಪಾಳು ಬಿದ್ದಿವೆ. ನೂರಕ್ಕೂ ಹೆಚ್ಚು ಆಸ್ಪತ್ರೆಗಳು ಬಾಡಿಗೆ ಕಟ್ಟಡದಲ್ಲಿವೆ. ಇನ್ನೂ ಕೆಲವು ಕಟ್ಟಡವಿದ್ದರೂ, ಅವುಗಳ ಪರಿಸ್ಥಿತಿ ಹದಿಗೆಟ್ಟು ಹಳ್ಳ ಹಿಡಿದ ಪರಿಣಾಮ ಖಾಸಗಿ ಕಟ್ಟಡಗಳಲ್ಲಿ ಶಿಫ್ಟ್ ಮಾಡಿ ನಡೆಸಲಾಗುತ್ತಿದೆ. ಅದಕ್ಕಾಗಿ ಕೆಟ್ಟಿರುವ ಆಸ್ಪತ್ರೆಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿ ಜನರ ಆರೋಗ್ಯದತ್ತ ಗಮನ ಹರಿಸುವಂತೆ ಮನವಿ ಮಾಡಿದರು.




Leave a Reply

Your email address will not be published. Required fields are marked *

error: Content is protected !!