ಆಲಮೇಲ ಪ.ಪಂ ಚುನಾವಣೆ: 24 ನಾಮಪತ್ರ ಸಲ್ಲಿಕೆ

504

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಆಲಮೇಲ ಪಟ್ಟಣದ ಪಂಚಾಯ್ತಿಯ 19 ವಾರ್ಡ್ ಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬರೋಬ್ಬರಿ 24 ಜನರು ನಾಮಪತ್ರ ಸಲ್ಲಿಸಿದ್ದಾರೆ. ಡಿಸೆಂಬರ್ 8ರಿಂದ ನಾಮಪತ್ರ ಪ್ರಕ್ರಿಯೆ ಶುರುವಾಗಿದ್ದು ಇದುವರೆಗೂ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಆದರೆ, ಸೋಮವಾರ ಒಂದೇ ದಿನದಲ್ಲಿ ಬರೋಬ್ಬರಿ 24 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

1ರಿಂದ 10ನೇ ವಾರ್ಡ್ ಗೆ ಬಿಜೆಪಿ 6, ಕಾಂಗ್ರೆಸ್ 3, ಬಿಎಸ್ಪಿ 1 ಹಾಗೂ ಪಕ್ಷೇತರರು 3 ಸೇರಿ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು 11-19ನೇ ವಾರ್ಡ್ ಗೆ ಬಿಜೆಪಿ 4, ಕಾಂಗ್ರೆಸ್ 4, ಜೆಡಿಎಸ್ 1, ಪಕ್ಷೇತರರು 2 ಸೇರಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನ ಕಾಲಾವಕಾಶವಿದೆ.




Leave a Reply

Your email address will not be published. Required fields are marked *

error: Content is protected !!