ಮತ್ತೊಂದು ಕೇಸಿನೊಂದಿಗೆ ಡಿಟೆಕ್ಟಿವ್ ದಿವಾಕರ ಎಂಟ್ರಿ

256

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ 2019ರಲ್ಲಿ ಬಂದ ಬೆಲ್ ಬಾಟಂ ಸಿನಿಮಾ ಸೂಪರ್ ಹಿಟ್ ಆಯ್ತು. ಒಂದೊಳ್ಳೆ ಸಸ್ಪೆನ್ಸ್ ಮೂವಿಯನ್ನ ನೀಡಿದ ನಿರ್ದೇಶಕ ಜಯತೀರ್ಥ ಅವರು, ಪ್ರೇಕ್ಷಕರನ್ನ ಮೋಡಿ ಮಾಡಿದ್ದರು. ಇಡೀ ಸಿನಿಮಾ ರೆಟ್ರೋ ಸ್ಟೈಲ್ ನಲ್ಲಿ ಬಿಗ್ ಸ್ಕ್ರೀನ್ ಮೇಲೆ ತಂದು ಸಕಸ್ಸ್ ಆದರು. ಇದೀಗ ಅದರ ಮುಂದುವರೆದ ಭಾಗ ರೆಡಿಯಾಗ್ತಿದೆ.

ಯೆಸ್, ಡಿಟೆಕ್ಟಿವ್ ದಿವಾಕರ ಹೊಸ ಕೇಸಿನೊಂದಿಗೆ ಬರ್ತಿದ್ದಾನೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ಅವರೆ ಇದರಲ್ಲಿಯೂ ಮುಂದುವರೆದಿದ್ದಾರೆ. ಜನವರಿ 27ಕ್ಕೆ ಚಿತ್ರ ತಂಡ ಅಧಿಕೃತವಾಗಿ ಟೈಟಲ್ ಲಾಂಚ್ ಮಾಡುತ್ತಿದೆ. ಹೊಸ ಕೇಸ್ ಯಾವುದು? ಪತ್ತೆ ಮಾಡಿ, ಕಾಮೆಂಟ್ ಮಾಡಿ ಎಂದು ನಿರ್ದೇಶಕ ಜಯತೀರ್ಥ ಅವರು ಸಿನಿ ರಸಿಕರ ತಲೆಗೆ ಹುಳ ಬಿಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!