ಬಿಹಾರದಲ್ಲಿ ಬಹುಮತಕ್ಕೂ ಮೊದಲೇ ಸ್ಪೀಕರ್ ರಾಜೀನಾಮೆ

294

ಪ್ರಜಾಸ್ತ್ರ ಸುದ್ದಿ

ಪಾಟ್ನಾ: ಬಿಹಾರ ವಿಧಾನಸಭೆಯ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಹಾರದಲ್ಲಿ ಮತ್ತೊಂದು ರೀತಿಯ ರಾಜಕೀಯದಾಟ ನಡೆದಿದೆ.

ಬಿಜೆಪಿ ಜೊತೆಗಿನ ದೋಸ್ತಿ ಮುರಿದುಕೊಂಡ ನಿತೀಶ್ ಕುಮಾರ್, ಆರ್ ಜೆಡಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದಾರೆ. ಜೆಡಿಯು, ಆರ್ ಜೆಡಿ ವಿಶ್ವಾಸಮತಯಾಚೆನಗೂ ಮೊದಲೇ ಸ್ಪೀಕರ್ ರಾಜೀನಾಮೆ ಸಲ್ಲಿಸಿದ್ದು, ಇದೊಂದು ಬಿಜೆಪಿಯ ಆಜ್ಞೆಯ ಮೇರೆಗೆ ನಡೆದ ದಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಕೆ ಸಿನ್ಹಾ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ನಾನು ರಾಜೀನಾಮೆ ನೀಡುವುದಿಲ್ಲ. ಬುಧವಾರ ವಿಧಾನಸಭೆಯ ಅಧಿವೇಶನದಲ್ಲಿ ನಾನೇ ಸಭಾಧ್ಯಕ್ಷತೆ ವಹಿಸುತ್ತೇನೆ ಎಂದು ಸಿನ್ಹಾ ಹೇಳಿದ್ದರು. ಆದರೆ, ಈಗ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. 243 ಸದಸ್ಯ ಬಲದ ಬಿಹಾರ್ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಬೆಂಬಲಕ್ಕೆ 164 ಶಾಸಕರಿದ್ದಾರೆ. ಆದರೂ, ಸಂವಿಧಾನದ ಪ್ರಕಾರ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು. ಆದರೆ, ಈಗ ಹೊಸ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ.




Leave a Reply

Your email address will not be published. Required fields are marked *

error: Content is protected !!