ಬೈಕ್ ಕಳ್ಳರ ಬಂಧನ

415

ಪ್ರಜಾಸ್ತ್ರ ಅಪರಾಧ ಸುದ್ದಿ

ಸಿಂದಗಿ: ಜಿಲ್ಲೆಯ ವಿವಿಧ ಭಾಗದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಅಪ್ರಾಪ್ತನಾಗಿದ್ದಾನೆ. ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ಅನುಮಾನಸ್ಪದ ಒಂದು ಬೈಕ್ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಿಡಿದು, ವಿಚಾರಣೆ ನಡೆಸಿದ ಬೈಕ್ ಕಳ್ಳತನ ಕೃತ್ಯ ಬಯಲಾಗಿದೆ.

ಅಬ್ದುಲ್ ಮುಜಾವರ, ಹಣಮಂತರಾಯ ಭಂಟನೂರ ಹಾಗೂ ಇನ್ನೊಬ್ಬ ಅಪ್ರಾಪ್ತ ಆರೋಪಿಯಾಗಿದ್ದಾನೆ. ಬಂಧಿತರು ಚಿಕ್ಕ ಸಿಂದಗಿ ಗ್ರಾಮದವರಾಗಿದ್ದಾರೆ. ಸಿಂದಗಿ ಠಾಣೆ ವ್ಯಾಪ್ತಿಯಲ್ಲಿ 8, ದೇವರಹಿಪ್ಪರಗಿ 2, ಕಲಕೇರಿ 1, ಇಂಡಿ ಗ್ರಾಮೀಣ ಠಾಣೆ 2, ಅಫಜಲಪೂರ 1 ಹಾಗೂ ವಿಜಯಪುರ ನಗರದಲ್ಲಿ 2 ಬೈಕ್ ಗಳು ಸೇರಿ 16 ಬೈಕ್ ಗಳನ್ನು ಕಳ್ಳತನ ಮಾಡಿದ್ದಾರೆ.

ಸುಮಾರು 8 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ 16 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಜಯಪುರ ಜೈಲಿಗೆ ಕಳುಹಿಸಿಕೊಡಲಾಗಿದೆ.




Leave a Reply

Your email address will not be published. Required fields are marked *

error: Content is protected !!