ಜೈಲಿನಲ್ಲೇ ಪತಿಯನ್ನು ಕೊಲ್ಲುವ ಪ್ರಯತ್ನ: ಸುನಿತಾ ಕೇಜ್ರಿವಾಲ್

69

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪತಿಗೆ ಇನ್ಸುಲಿನ್ ನೀಡದೆ ಜೈಲಿನಲ್ಲೇ ಕೊಲ್ಲಲು ಆಡಳಿತರೂಢ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಗಂಭೀರ ಆರೋಪ ಮಾಡಿದ್ದಾರೆ. ರಾಂಚಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ನನ್ನ ಪತಿಗೆ ಶುಗರ್ ಇದೆ. ಕಳೆದ 12 ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿದಿನ 50 ಯುನಿಟ್ ಇನ್ಸುಲಿನ್ ಬೇಕು. ಆದರೆ ಇನ್ಸುಲಿನ್ ನೀಡುವುದನ್ನು ನಿರಾಕರಿಸಲಾಗುತ್ತಿದೆ. ಅವರ ಊಟವನ್ನು ಸಹ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ನನ್ನ ಪತಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಯಾವುದೇ ದಾಖಲೆಗಳು ಇಲ್ಲ. ಜನರ ಸೇವೆ ಮಾಡಿದ್ದಕ್ಕಾಗಿ ಜೈಲಿಗೆ ಹಾಕಲಾಗಿದೆ. ಸರ್ವಾಧಿಕಾರಿತನದ ವಿರುದ್ಧ ನಾವು ಹೋರಾಡಬೇಕಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!