ಬಿಜೆಪಿ ಶಾಸಕಾಂಗ ಪಕ್ಷದ ಸಭೆ

309

ಮುಂಬೈ: ಬಿಜೆಪಿ ಹಾಗೂ ಶಿವಸೇನೆ ನಡೆವೆ ಇನ್ನೂ ಹೊಂದಾಣಿಕೆ ಮೂಡಣದ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡಲು ಸಾಧ್ಯವಾಗ್ತಿಲ್ಲ. ಇದರ ನಡುವೆ ಬಿಜೆಪಿ ಇಂದು ಮಧ್ಯಾಹ್ನ ಶಾಸಕಂಗ ಪಕ್ಷದ ಸಭೆ ನಡೆಸ್ತಿದ್ದು, ನಾಯಕನ ಆಯ್ಕೆ ಕೆಲಸ ಮಾಡಲಿದೆ.

ಈಗಾಗ್ಲೇ ನಾನೇ ಮುಂದಿನ ಸಿಎಂ ಅಂತಾ ಫಡ್ನಾವಿಸ್ ಹೇಳಿದ್ದಾರೆ. ಇದಕ್ಕೆ ಮಿತ್ರ ಪಕ್ಷ ಶಿವಸೇನೆ ಮಾತ್ರ ನೋ ಅಂತಿದೆ. ನೀವು ಮೊದಲು ಮಾತ್ನಾಡಿದ್ದಂತೆ ಅಧಿಕಾರ, ಹುದ್ದೆಯಲ್ಲಿ ಸಮವಾಗಿ ಹಂಚಿಕೆ ಮಾಡಿ ಅಂತಿದೆ. ಪಕ್ಷದ ಪತ್ರಿಕೆಯಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡಿರುವುದು ಇವರ ನಡುವೆ ಮತ್ತೆ ಗ್ಯಾಪ್ ಮೂಡುವಂತೆ ಮಾಡಿದೆ.

ಈ ಬಾರಿ 105ರಲ್ಲಿ ಬಿಜೆಪಿ ಗೆದ್ದಿದೆ. 56ರಲ್ಲಿ ಶಿವಸೇನೆ ಗೆದ್ದಿದೆ. ಹೀಗಾಗಿ 50-50 ಸೂತ್ರವನ್ನ ಸೇನೆ ಮುಂದಿಟ್ಟಿದೆ. ಇದಕ್ಕೆ ಬಿಜೆಪಿ ಆಗಲ್ಲ ಅಂತಿದೆ. ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ನಿಯೋಜಿತ ಸಿಎಂ ದೇವೇಂದ್ರ ಫಡ್ನಾವಿಸ್ ಅವರನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡುವ ಸಾಧ್ಯತೆ ಹೆಚ್ಚು. ಈ ವೇಳೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಉಪಾಧ್ಯಕ್ಷ ಅವಿನಾಶ ರೈ ಉಪಸ್ಥಿತಿ ಇರಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!