ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಯೋಧನ ಹತ್ಯೆ

123

ಪ್ರಜಾಸ್ತ್ರ ಅಪರಾಧ ಸುದ್ದಿ

ಖೇದಾ(ಗುಜರಾತ್): ಮಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಬಗ್ಗೆ ಪ್ರಶ್ನಿಸಿದ ಬಿಎಸ್ಎಫ್ ಯೋಧನನ್ನು ಹತ್ಯೆ ಮಾಡಿದ ಘಟನೆ ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ನಡೆದಿದೆ. ಮೆಲ್ಜಿಬಾಯಿ ವಘೇಲಾ(45) ಮೃತ ಯೋಧನಾಗಿದ್ದಾನೆ.

ಹುಡುಗನ ಮನೆಗೆ ಮಗನೊಂದಿಗೆ ಹೋಗಿ ಘಟನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ದುಷ್ಕರ್ಮಿಗಳು ದೊಣ್ಣೆ ಹಾಗೂ ಹರಿತವಾದ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾರೆ. ಮೆಲ್ಜಿಬಾಯಿ ಸ್ಥಳದಲ್ಲೇ ಮೃತಪಟ್ಟರೆ, ಇತನ ಮಗನಿಗೆ ಗಾಯಗಳಾಗಿವೆ.

ವಾಣಿಪುರದ ಶೈಲೇಶ್ ಅಲಿಯಾಸ್ ಸುನಿಲ್ ಜಾದವ್ ಎಂಬಾತ, ಯೋಧನ ಮಗಳ ಆಕ್ಷೇಪರ್ಹ ವಿಡಿಯೋವನ್ನು ವೈರಲ್ ಮಾಡಿದ್ದ. ಇದನ್ನು ಪ್ರಶ್ನಿಸಲು ಹೋದಾಗ ಈ ಕೃತ್ಯ ನಡೆದಿದೆ. ಈ ವೇಳೆ ಆರೋಪಿ ಶೈಲೇಶ್ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಇಬ್ಬರು ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಯೋಧ ಮೆಲ್ಜಿಬಾಯಿ ವಾಘೇಲ್ ಪುತ್ರ ನವದೀಪ್ ಅಹಮದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.




Leave a Reply

Your email address will not be published. Required fields are marked *

error: Content is protected !!