ಬಜೆಟ್ ನಲ್ಲಿ ಕೃಷಿ, ಕಾರ್ಮಿಕ ಕ್ಷೇತ್ರಕ್ಕೆ ಏನು? ವಿಮಾನ ನಿಲ್ದಾಣಗಳು ಖಾಸಗೀಕರಣ

251

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಯನ್ನ 32 ರಾಜ್ಯಗಳಿಗೆ ವಿಸ್ತರಿಸಲಾಗ್ತಿದೆ. ಈ ಮೂಲಕ ಪಡಿತರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದ್ರೂ ಪಡಿತರ ಪಡೆಯಬಹುದು.  ಇನ್ನು ಕುಟುಂಬದ ಸದಸ್ಯರ ಆಧಾರದ ಮೇಲೆ ರೇಷನ್ ನೀಡಲಾಗುವುದು.

ಇನ್ನು ಅಸಂಘಟಿತ ಕಾರ್ಮಿಕ ವಲಯಗಳಿಗೆ ಪಿಂಚಣಿ ವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತು. ಕೃಷಿ ಕ್ಷೇತ್ರ ಚೇತರಿಕೆಗೆ ಹೊಸ ಯೋಜನೆ. ಧಾನ್ಯಗಳ ಖರೀದಿಗೆ 10,500 ಕೋಟಿ ರೂಪಾಯಿ ಮೀಸಲು. ರೈತರ ಸಾಲಕ್ಕಾಗಿ 16.5 ಲಕ್ಷ ಕೋಟಿ ಮೀಸಲು. ಕನಿಷ್ಠ ಬೆಂಬಲ ಬೆಲೆಯಿಂದ 43 ಕೋಟಿ ರೈತರಿಗೆ ಲಾಭ ಎಂದು ಹೇಳಿದ್ದಾರೆ. ಪಶುಪಾಲನೆ, ಹೈನುಗಾರಿಕೆ, ಕುಕ್ಕುಟೋದ್ಯಮಕ್ಕೆ ಅನುದಾನ. ಬ್ಯಾಂಕ್ ಠೇವಣಿದಾರ ವಿಮೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ.

ಇನ್ನು ರೈಲ್ವೆ ಇಲಾಖೆಗೆ 2021-22ನೇ ಸಾಲಿನಲ್ಲಿ 1,10,055 ಕೋಟಿ ಅನುದಾನ ಘೋಷಣೆ. 2030ರ ವೇಳೆಗೆ ರಾಷ್ಟ್ರೀಯ ರೈಲು ಯೋಜನೆ. 2023ರ ವೇಳೆಗೆ 100 ಬ್ರಾಡ್ ಗೇಜ್ ಹಳಿಗಳ ವಿದ್ಯುಧೀಕರಣ ಮಾಡಲಾಗುವುದು.

ದೇಶದಲ್ಲಿ ಈಗಾಗ್ಲೇ 702 ಕಿಲೋ ಮೀಟರ್ ಮೆಟ್ರೋ ರೈಲು ಸೇವೆ ಇದೆ. 1016 ಕಿಲೋ ಮೀಟರ್ ಕಾಮಗಾರಿ ನಡೆಯುತ್ತಿದೆ. ಇನ್ನು ಟೈರ್ 2 ಹಾಗೂ ಟೈರ್ 1 ನಗರಗಳಲ್ಲಿ ಮೆಟ್ರೋಲೈಟ್ ಹಾಗೂ ಮೆಟ್ರೊನಿಯೊ ತಂತ್ರಜ್ಞಾನ. ಬೆಂಗಳೂರು ಮೆಟ್ರೋಗೆ 14,788 ಕೋಟಿ ಅನುದಾನ.

ರಸ್ತೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.18 ಟ್ರಿಲಿಯನ್ ಕೋಟಿ ಅನುದಾನ. 1.08 ಟ್ರಿಲಿಯನ್ ಕೋಟಿ ಬಂಡವಾಳ ವೆಚ್ಚವಾಗಿರಲಿದೆ. ಟೈರ್ 2 ಹಾಗೂ ಟೈರ್ 3 ನಗರಗಳಲ್ಲಿ ಹಲವು ವಿಮಾನ ನಿಲ್ದಾಣಗಳು ಖಾಸಗೀಕರಣಗೊಳ್ಳಲಿವೆ.




Leave a Reply

Your email address will not be published. Required fields are marked *

error: Content is protected !!