ಬಸ್ ಅಪಘಾತ: ಇಬ್ಬರ ಸಾವು, 10 ಜನರಿಗೆ ಗಾಯ

497

ಪ್ರಜಾಸ್ತ್ರ ಸುದ್ದಿ

ತುಮಕೂರು: ಚಾಲಕನ ನಿಯಂತ್ರ ತಪ್ಪಿ ಕೆಎಸ್ಆರ್ ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊರಟಗೆರೆ ತಾಲೂಕಿನ ಕಾಶಪುರ ಗ್ರಾಮದ ಹತ್ತಿರ ನಡೆದಿದೆ. ಇದರಿಂದಾಗಿ ಇಬ್ಬರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ.

ರೈತ ಗೋಪಾಲ ನಾಯ್ಕ ಹಾಗೂ ಭೀಕ್ಷುಕನೊಬ್ಬ ಮೃತಪಟ್ಟಿರುವುದು ತಿಳಿದು ಬಂದಿದೆ. ಬಸ್ ನಲ್ಲಿದ್ದ ಪ್ರಯಾಣಿಕರಲ್ಲಿ 10 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!