ಸಿಇಟಿ ಪರೀಕ್ಷೆ ದಿನಾಂಕ ನಿಗದಿ

245

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ನಿಂದಾಗಿ ಈ ಬಾರಿ ಪರೀಕ್ಷೆ ಇಲ್ಲದೆ ಪಿಯುಸಿ ವಿದ್ಯಾರ್ಥಿಗಳನ್ನೆಲ್ಲ ಪಾಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ವೃತ್ತಿಪರ ಕೋರ್ಸ್ ಗಳಿಗೆ ನಡೆಸುವ ಸಿಇಟಿ ಪರೀಕ್ಷೆಯ ದಿನಾಂಕ ಘೋಷಣೆ ಮಾಡಲಾಗಿದೆ. ಆಗಸ್ಟ್ 28 ಹಾಗೂ 29ರಂದು ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥನಾರಾಯಣ ಹೇಳಿದ್ದಾರೆ.

ಆಗಸ್ಟ್ 28ರಂದು ಗಣಿತ ಹಾಗೂ ಬಯೋಲಾಜಿ, 29ರಂದು ಕೆಮಿಸ್ಟ್ರಿ, ಫಿಜಿಕ್ಸ್ ಪರೀಕ್ಷೆ ನಡೆಯಲಿದೆ. ಇನ್ನು ಈ ವರ್ಷ ಪಿಯುಸಿ ಅಂಕಗಳನ್ನು ಸಿಇಟಿಗೆ ಪರಿಗಣಿಸುವುದಿಲ್ಲ. ಸಿಇಟಿ ಪರೀಕ್ಷೆಯ ರ್ಯಾಂಕ್ ಪಾತ್ರ ಪರಿಗಣಿಸಲಾಗುತ್ತೆ ಎಂದಿದ್ದಾರೆ. ಮೂರನೇ ದಿನ ಗಡಿಗಾನು ಕನ್ನಡಿಗರಿಗೆ ಪರೀಕ್ಷೆ ನಡೆಯಲಿದೆ. ಜೂನ್ 15ರಿಂದ ಪರೀಕ್ಷೆ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!