ಕಾರು ಅಪಘಾತ: ನಟಿ ರಿಷಿಕಾ ಆಸ್ಪತ್ರೆಗೆ ದಾಖಲು

369

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಿಷಿಕಾ ಸಿಂಗ್ ಪ್ರಯಾಣಿಸ್ತಿದ್ದ ಕಾರು ಆಪಘಾತಕ್ಕೆ ಈಡೇಗಿದೆ. ಬೆಂಗಳೂರಿನ ಮಾವಳ್ಳಿ ಬಳಿ ಕಾರು ಅಪಘಾತವಾಗಿದೆ. ಇದೆ ವೇಳೆ ಕಾರಿನಲ್ಲಿ ಇನ್ನೊಬ್ಬರು ಇದ್ರು ಎಂದು ಹೇಳಲಾಗ್ತಿದೆ.

ಇದೀಗ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ರಿಷಿಕಾ ಸಿಂಗ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಪುತ್ರಿಯಾಗಿದ್ದು, ಕಳ್ಳ ಮಳ್ಳ ಸುಳ್ಳ, ಕಂಠೀರವ, ಮಾಣಿಕ್, ಬೆಂಕಿ ಬಿರುಗಾಳಿ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಹಿರಿಯ ನಟ ಜೈ ಜೈಗದೀಶ ಹಾಗೂ ವಿಜಯಲಕ್ಷ್ಮಿ ಸಿಂಗ್ ಅವರ ಹಿರಿಯ ಮಗಳು ಇದ್ದಳು ಎಂದು ಹೇಳಲಾಗ್ತಿದೆ. ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರು ರಾಜೇಂದ್ರ ಸಿಂಗ್ ಬಾಬು ಅವರ ಸಹೋದರಿಯಾಗಿದ್ದಾರೆ. ಹೀಗಾಗಿ ನಟಿ ರಿಷಿಕಾ ಹಾಗೂ ಜೈ ಜಗದೀಶ ಮಗಳು ಸಂಬಂಧಿಕರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!