ಚಂದ್ರಯಾನ-2 ಫಸ್ಟ್ ಫೋಟೋ

417

ಬೆಂಗಳೂರು: ದೇಶದ ಬಹುನಿರೀಕ್ಷಿತ ಚಂದ್ರಯಾನ-2 ಯೋಜನೆಯ ಮೊದಲ ಫೋಟೋಗಳನ್ನ ಬಿಡುಗಡೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದನ್ನ ದೂರದರ್ಶನ ನ್ಯೂಸ್ ನ ಟ್ವೀಟರ್ ನಲ್ಲಿಯೂ ಪೋಸ್ಟ್ ಮಾಡಲಾಗಿದೆ.

ಜುಲೈ 9ರಿಂದ 16ರ ತನಕ ಉಡಾವಣೆ ನಡೆಯಲಿದ್ದು, ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್  ಕೇಂದ್ರದಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ. ಇದೀಗ ಬಿಡುಗಡೆ ಮಾಡಿರುವ ಫೋಟೋಗಳು ಸಾಕಷ್ಟು ಕುತೂಹಲ ಮೂಡಿಸಿವೆ.

ಚಂದ್ರಯಾನ-2 ಯೋಜನೆ, ಸ್ವದೇಶಿ ನಿರ್ಮಿತ ಜಿಎಸ್ಎಲ್ ವಿ ಎಂಕೆ3 ನೌಕೆ ಮೂಲಕ ಮೂರು ಹಂತಗಳಲ್ಲಿ ಸಾಗಲಿದೆ. 10 ವರ್ಷಗಳ ಬಳಿಕ ಇಸ್ರೋ ಎರಡನೇ ಬಾರಿಗೆ ಚಂದ್ರಯಾನ ಯೋಜನೆಯನ್ನ ಕೈಗೆತ್ತಿಕೊಂಡಿದೆ. 2009ರಲ್ಲಿ ಮೊದಲ ಚಂದ್ರಯಾನ ಯೋಜನೆಯನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಲಾಗಿತ್ತು.




Leave a Reply

Your email address will not be published. Required fields are marked *

error: Content is protected !!