ಕೋವಿಡ್ 19: ಸಿಂದಗಿಯ ಪ್ರಸಿದ್ಧ ಚೌಡೇಶ್ವರಿದೇವಿ ಜಾತ್ರೆ ರದ್ದು

625

ಸಿಂದಗಿ: ಕೋವಿಡ್ 19 ಲಾಕ್ ಡೌನ್ ಮೇ 31ರ ತನಕ ಇರುವುದ್ರಿಂದ ಪಟ್ಟಣದ ಐತಿಹಾಸಿಕ ಶ್ರೀ ಚೌಡೇಶ್ವರಿದೇವಿ ಜಾತ್ರೆಯನ್ನ ರದ್ದು ಮಾಡಲಾಗಿದೆ. ಸಾಮೂಹಿಕವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನ ನಡೆಸಬಾರದು ಅನ್ನೋ ಕೇಂದ್ರದ ನಿಯಮವಿದ್ದು, ಹೀಗಾಗಿ ಈ ಬಾರಿ ಜಾತ್ರೆಯನ್ನ ರದ್ದು ಮಾಡಲಾಗಿದೆ.

ಮೇ 21 ಹಾಗೂ 22 ರಂದು ನಡೆಯಬೇಕಿದ್ದ ಜಾತ್ರೆಯನ್ನ ರದ್ದು ಮಾಡಲಾಗಿದೆ ಎಂದು ಸಿಂದಗಿ ಚೌಡೇಶ್ವರಿ ಸೇವಾ ಸಮಿತಿಯಿಂದ ನಿರ್ಧರಿಸಲಾಗಿದೆ. ಹೀಗಾಗಿ ಕರೋನಾ ದೇಶ ಬಿಟ್ಟು ತೊಲಗಲಿ ಎಂದು ಸಕಲ ಭಕ್ತರು ಮನೆಯಲ್ಲಿ ಶ್ರೀ ಚೌಡೇಶ್ವರಿದೇವಿ ಹೆಸರಿನಲ್ಲಿ ಪ್ರಾರ್ಥಿಸಿ ಎಂದು ಸಮಿತಿ ಅಧ್ಯಕ್ಷ ರಾಜು ಅವರು ತಿಳಿಸಿದ್ದಾರೆ.

ಬಾದಾಮಿ ಅಮವಾಸ್ಯೆ ನಿಮಿತ್ಯ ಪ್ರತಿ ವರ್ಷ ಪಟ್ಟಣದಲ್ಲಿ ವಿಜೃಂಭಣೆಯ ಜಾತ್ರೆ ನಡೆಯುತಿತ್ತು. ಇದಕ್ಕಾಗಿ ತಾಲೂಕು ಭಾಗದ ಜನರು ಸೇರಿದಂತೆ ಹೊರ ರಾಜ್ಯಗಳಲ್ಲಿ ವಾಸಿಸ್ತಿರುವ ಪಟ್ಟಣದ ಜನತೆ ಸಹ ಬಂದು ಸೇರುತ್ತಿದ್ರು. ಆದ್ರೆ, ಈ ಬಾರಿ ಎಲ್ಲದಕ್ಕೂ ಕರೋನಾ ಅಡ್ಡಗಾಲು ಹಾಕಿದೆ. ಜಾತ್ರೆಯನ್ನ ರದ್ದು ಮಾಡಿರುವ ಕಾರಣ ಭಕ್ತರು ದೇವಸ್ಥಾನಕ್ಕೆ ಬರುವುದನ್ನ ತಪ್ಪಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!