ಸತತ ಮಳೆ: ಮನೆ ಮಾಳಿಗಿ ಕುಸಿತ

151

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ತಾಲೂಕಿನ ಹಲವು ಕಡೆ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸತತ ಮಳೆಯಿಂದ ಮನೆಗಳ ಗೋಡೆ ನೆನೆದು ಕುಸಿದು ಬೀಳುತ್ತಿದ್ದು, ತಾಲೂಕಿನ ಮದರಿ ಗ್ರಾಮದಲ್ಲಿ ಮನೆಯೊಂದರ ಮಾಳಿಗಿ ಕುಸಿದು ಬಿದ್ದಿದೆ.

ಮದರಿ ಗ್ರಾಮದ ಸಿದ್ದಪ್ಪ ಗುರಪ್ಪ ಸುತಾರ ಎಂಬುವರ ಮನೆಯ ಮಾಳಿಗಿ ಮಂಗಳವಾರ ರಾತ್ರಿ ಬಿದ್ದು ಹೋಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಮನೆ ಹೊರ ಭಾಗದಲ್ಲಿ ಸದಸ್ಯರು ಮಲಗಿದ್ದರು. ಹೀಗಾಗಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಈ ಕುರಿತು ಸಿದ್ದರಪ್ಪನವರ ಮಗ ಸದಾನಂದ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಅಧ್ಯಕ್ಷರು, ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!