32 ಯುವಕರಿಂದ ಉಚಿತ ರಕ್ತದಾನ

199

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕು ಆಸ್ಪತ್ರೆಯಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ, ಸಿಂದಗಿ ಘಟಕದ ವತಿಯಿಂದ ಗುರುವಾರ ಉಚಿತ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ವೇದಿಕೆಯ ಅಧ್ಯಕ್ಷ ಮೌಲಾನಾ ದಾವುದ್ ನದ್ವ ಉದ್ಘಾಟಿಸಿದರು.

ಈ ವೇದಿಕೆ ಮಾನವೀಯತೆ ಆಧಾರದ ಮೇಲೆ ಸಹಾಯ ಸಹಕಾರ ಸೇವೆಯ ಚಟುವಟಿಕೆ ಕಾರ್ಯ ನಡೆಸುತ್ತದೆ. ಪರಸ್ಪರ ಸಹೋದರತೆ ಪ್ರೀತಿ ವಿಶ್ವಾಸದ ವಾತಾವರಣ ನಿರ್ಮಿಸಿವುದು ಮುಖ್ಯ ಉದ್ದೇಶವಾಗಿದೆ. ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪರಸ್ಪರ ಸಹಕಾರ ಅಗತ್ಯ. ಇದರಿಂದ ಮಾನವ ಸಮಾಜ ಮತ್ತು ದೇಶ ಸದೃಢವಾಗುತ್ತದೆ ಅಂತಾ ವೇದಿಕೆ ಅಧ್ಯಕ್ಷ ಮೌಲಾನಾ ದಾವುದ್ ನದ್ವ ಹೇಳಿದರು.

ರಾಜಶೇಖರ ನರಗೋದಿ ಮಾತನಾಡಿ, ರಕ್ತದಾನ ಶ್ರೇಷ್ಠದಾನ. ಒಬ್ಬ ವ್ಯಕ್ತಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ನಾಲ್ಕು ಜನರ ಜೀವನ ಉಳಿಸಬಹುದು. ಇಂದಿನ ವಿಜ್ಞಾನದ ಯುಗದಲ್ಲಿ ಕೃತಕವಾಗಿ ಕೈ, ಕಾಲು, ಹೃದಯ ಸೇರಿ ಹಲವು ಅಂಗಾಂಗಗಳು ಆವಿಸ್ಕಾರ ಮಾಡಲಾಗಿದೆ. ಆದರೆ ರಕ್ತ ಮಾತ್ರ ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲ. ಹೀಗಾಗಿ ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದರು.

ಈ ವೇಳೆ 32 ಯುವಕರು ರಕ್ತ ದಾನ ಮಾಡಿದರು. ಈ ಸಂದರ್ಭದಲ್ಲಿ ಡಾ.ಮಾಗಿ, ಡಾ.ವಿಧ್ಯಾಶ್ರಿ, ಖತೀಜಾ ಕಲೀಮುಲ್ಲಾ, ಮುಸಾ ಫೈಜಾನ, ತಾಲೂಕ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!