ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ನಾಲ್ವರ ಬಂಧನ

268

ಪ್ರಜಾಸ್ತ್ರ ಅಪರಾಧ ಸುದ್ದಿ

ಆಳಂದ: ಗೃಹಣಿಯೊಬ್ಬಳು ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನ ಹತ್ಯೆ ಮಾಡಿದ ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಗಾಣಗಾಪುರ ಹತ್ತಿರ ಈ ಒಂದು ಕೃತ್ಯ ನಡೆದಿತ್ತು.

ಫೆಬ್ರವರಿ 16ರಂದು ಧಂಗಾಪುರದ ರವಿ(35) ಎಂಬಾತನ ಮೃತದೇಹ ಪತ್ತೆಯಾಗಿತ್ತು. ರವಿ ಪತ್ನಿ ಠಾಣೆಯಲ್ಲಿ ಯಾರೋ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ಳು. ತನಿಖೆ ನಡೆಸಿದ ಪೊಲೀಸರಿಗೆ ಈ ಕೃತ್ಯವೆಸಗಿದ್ದು ಪತ್ನಿ ಹಾಗೂ ಆತನ ಪ್ರಿಯಕರನ ಟೀಂ ಅನ್ನೋದು ತಿಳಿದಿದೆ.

ರವಿ ಪತ್ನಿ ಹುಚ್ಚಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ಳಂತೆ. ಅದು ತಿಳಿದು ಬುದ್ದಿವಾದ ಹೇಳಿದ್ದಾನೆ. ಈ ಬಗ್ಗೆ ಪ್ರಿಯಕರನಿಗೆ ತಿಳಿಸಿದ್ದಾಳೆ. ಆತನ ಸ್ನೇಹಿತರಿಬ್ಬರು ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!