ರಂಗೋಲಿಯಲ್ಲಿ ಕರೋನಾ ಮೂಡಿಸಿ ಜಾಗೃತಿ

397

ಕಾಗವಾಡ: ಕರೋನಾ ಜಾಗೃತಿಯನ್ನ ಎಲ್ಲೆಡೆ ಮೂಡಿಸಲಾಗ್ತಿದೆ. ಎಷ್ಟೊಂದು ವಿಭಿನ್ನವಾಗಿ ಸಾಧ್ಯವೋ ಅಷ್ಟೊಂದು ವಿಭಿನ್ನವಾಗಿ ಜಾಗೃತಿ ಮೂಡಿಸಿ, ಜನರನ್ನ ಮನೆಯಿಂದ ಹೊರಗೆ ಬರದಂತೆ ಮಾಡಲಾಗ್ತಿದೆ. ಅದೇ ರೀತಿ ಕಾಗವಾಡ ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಜಾಗೃತಿ ಮೂಡಿಸಲಾಗ್ತಿದೆ.

ಕಾಗವಾಡ ಗ್ರಾಮ ಪಂಚಾಯತಿ ವತಿಯಿಂದ ರಾಣಿ ಚನ್ನಮ್ಮಾ ವೃತ್ತದಲ್ಲಿ ಕರೋನಾದ ರಾಕ್ಷಸ ರೂಪದ ಚಿತ್ರವನ್ನ ರಂಗೋಲಿಯಲ್ಲಿ ಬಿಡಿಸುವ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಲಾಗ್ತಿದೆ. ಪ್ರಧಾನಿ ಜನತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ ಘೋಷಣೆ ಮಾಡಿ 16 ದಿನಗಳಾಗಿವೆ. ಆದರೂ ಅನೇಕರು ತಲೆಕೆಡಿಸಿಕೊಳ್ಳದೆ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರ್ತಿದ್ದಾರೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗ್ತಿದೆ.

ಕಾಗವಾಡ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಈರಣಗೌಡ ಎರಣಗೌಡರ ಕರೋನಾ ಚಿತ್ರ ಬಿಡಿಸಲು ಆದೇಶಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀದೇವಿ ಚೌಗಲೆ, ಪಿಡಿಓ ಶಿಲ್ಪಾ ನಾಯ್ಕವಾಡಿ, ಶಿರಗುಪ್ಪಿ ಗ್ರಾಮದಲ್ಲಿ  ಗ್ರಾ.ಪಂ ಅಧ್ಯಕ್ಷ ಈಕ್ಬಾಲ ಕನವಾಡೆ, ಪಿಡಿಓ ಶ್ರೀಶೈಲ ಭಜಂತ್ರಿಯವರು ವಿಶಾಲವಾದ ಕೊರೋನಾ ಚಿತ್ರ ಸಹಾಯ ಮಾಡಿದ್ದಾರೆ. ಪಿಎಸ್ಐ ಹಣಮಂತ ಶಿರಹಟ್ಟಿ ಅವರು ಕರೋನಾ ಚಿತ್ರವು ಸಮಾಜದಲ್ಲಿ ಅರಿವು ಮೂಡಿಸಲು ಇದೊಂದು ಒಳ್ಳೆಯ ಪ್ರಯೋಗವೆಂದರು.




Leave a Reply

Your email address will not be published. Required fields are marked *

error: Content is protected !!