ಚಿಕಿತ್ಸೆ ಸಿಗದೆ ಮಗು ಸಾವು: ಸಿಎಂ ಮನೆ ಎದುರು ತಂದೆಯ ಪ್ರತಿಭಟನೆ

338

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸಾವು ನೋವಿನ ಪ್ರಕರಣಗಳು ಹೆಚ್ಚಾಗ್ತಿವೆ. ನಿತ್ಯ 100ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗ್ತಿದ್ದಾರೆ. ಸಾಮಾನ್ಯ ಜನರಿಗೆ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಹೀಗಾಗಿ ಸಾವಿನ ಪ್ರಮಾಣ ಏರಿಕೆಯಾಗ್ತಿದೆ ಎನ್ನಲಾಗ್ತಿದೆ.

ಸಿಲಿಕಾನ್ ಸಿಟಿಯ ಮಂಜುನಾಥನಗರದ ನಿವಾಸಿಯೊಬ್ಬರ 1 ತಿಂಗಳ ಮಗುವೊಂದು ಸಾವನ್ನಪ್ಪಿದೆ. ಸೋಂಕು ತಗುಲಿದ ಮಗುವಿಗೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣಕ್ಕೆ ಮೃತಪಟ್ಟಿದ್ದು, ತಂದೆ ವೆಂಕಟೇಶ ಸಿಎಂ ನಿವಾಸ ದವಳಗಿರಿ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದ್ರು.

ವೆಂಕಟೇಶ ಮಗು ಜುಲೈ 11ರಂದು ಸಾವನ್ನಪ್ಪಿದೆ. ಘಟನೆ ಜುಲೈ 16ರಂದು ಬೆಳಕಿಗೆ ಬಂದಿದೆ. ಹೀಗಾಗಿ ಘಟನೆ ಬಗ್ಗೆ ಡಿಸಿಎಂ ಮತ್ತು ಸಚಿವರು ಬೇಸರ ವ್ಯಕ್ತಪಡಿಸಿದ್ರು. ಆದ್ರೆ, ತಮಗೆ ಆದ ರೀತಿ ಬೇರೆಯವರೆಗೆ ಅನ್ಯಾಯವಾಗಬಾರದು. ಇತರರಿಗೆ ಸೂಕ್ತ ಚಿಕಿತ್ಸೆ ಸಿಗಬೇಕೆಂದು ವೆಂಕಟೇಶ ಮಗುವಿನ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ್ರು. ಬಳಿಕ ಅವರನ್ನ ಪೊಲೀಸರು ಕರೆದುಕೊಂಡು ಹೋದರು.




Leave a Reply

Your email address will not be published. Required fields are marked *

error: Content is protected !!