ಕೋತಿಗಳ ಕುಚೇಷ್ಟೆಗೆ 4 ಮಕ್ಕಳು ಸೇರಿ ಐವರ ಸಾವು

502

ಪ್ರಜಾಸ್ತ್ರ ಸುದ್ದಿ

ಶಹಜನಾಪುರ್: ಮಂಗಗಳ ಕುಚೇಷ್ಟೆಗೆ ನಾಲ್ವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದ ಘಟನೆ, ಉತ್ತರ ಪ್ರದೇಶದ ಶಹಜನಾಪುರ್ ನಗರದ ಖೇಲ್ ಅನ್ನೋ ಏರಿಯಾದಲ್ಲಿ ನಡೆದಿದೆ. ಅಲ್ದೇ, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಶಿಥಿಲಗೊಂಡಿರುವ ಗೋಡೆಯ ಮೇಲೆ ಕೋತಿ ಗುಂಪೊಂದು ಬಂದು ಕುಳಿತಿದೆ. ಅಲ್ದೇ, ಗೋಡೆಯನ್ನ ಅಲುಗಾಡಿಸಲು ಶುರುಮಾಡಿವೆ. ಇದ್ರಿಂದಾಗಿ ಗೋಡೆ ಕುಸಿದು ಪಕ್ಕದ ಮನೆಯ ಮೇಲೆ ಬಿದ್ದಿದೆ. ನಿದ್ದೆಯಲ್ಲಿದ್ದ 45 ವರ್ಷದ ಮಹಿಳೆ ಹಾಗೂ ಆಕೆಯ 6 ಮಕ್ಕಳಲ್ಲಿ 4 ಮಕ್ಕಳು ಸಾವನ್ನಪ್ಪಿವೆ. ಗಾಯಗೊಂಡ ಇಬ್ಬರು ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಇಂದ್ರ ವಿಕ್ರಮ ಸಿಂಗ್, ನಿಜಕ್ಕೂ ಇದೊಂದು ದುರಂತ. ಬದುಕಿಳಿದ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು. ರಾಜ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಘೋಷಣೆಯಾಗಿದ್ದು, ಶೀಘ್ರದಲ್ಲಿ ಅದನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!