ವಿಜಯಪುರ ನಗರಕ್ಕೆ ಕಂಟಕವಾಗುತ್ತಾ 17ರ ಬಾಲಕಿಯ ಸೋಂಕು?

395

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಮದುವೆ ನಿಶ್ಚಿತಾರ್ಥ ನಡೆದ ಮನೆಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಎಲ್ಲರಲ್ಲಿ ಆತಂಕ ಮೂಡಿಸಿದೆ. ನಗರದಲ್ಲಿ ಯುವತಿಯೊಬ್ಬಳ ನಿಶ್ಚಿತಾರ್ಥ ಇತ್ತೀಚೆಗೆ ನಡೆದಿದೆ. ಈ ಯುವತಿಯ ತಂಗಿಗೆ ಕರೋನಾ ಸೋಂಕು ದೃಢಪಟ್ಟಿದೆ.

ಅಕ್ಕನ ಎಂಗೇಜಮೆಂಟ್ ಗೂ ಮೊದಲು  ಕೆಮ್ಮು, ಶೀತ, ಜ್ವರದಿಂದ 17 ವರ್ಷದ ಬಾಲಕಿ ಆಸ್ಪತ್ರೆಗೆ ಹೋಗಿದ್ದಳು. ಬಾಲಕಿ ಸ್ವ್ಯಾಬ್ ಕಲೆಕ್ಟ್ ಮಾಡಿಕೊಂಡು ಹೋ‌ಮ್ ಕ್ವಾರಂಟೈನ್ ಆಗುವಂತೆ ವೈದ್ಯರು ತಿಳಿಸಿದ್ರು. ಅದರಂತೆ ಬಾಲಕಿ ಮನೆಯಲ್ಲಿದ್ದಳು. ಮರುದಿನವೇ ನಡೆದ ಅಕ್ಕನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ತಂಗಿಯೂ ಭಾಗವಹಿಸಿ ಕೆಲಸ ಕಾರ್ಯದಲ್ಲಿ ಓಡಾಡಿಕೊಂಡಿದ್ಳು.

ಇದೀಗ ಬಂದ ಆ ಬಾಲಕಿಯ ವರದಿಯಲ್ಲಿ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 150ಕ್ಕೂ ಅಧಿಕ‌ ಜನರಿಗೆ ಕಂಟಕ ಶುರುವಾಗಿದ್ದು, ಬಂದವರನ್ನೆಲ್ಲ ಜಿಲ್ಲಾಡಳಿತ ಹುಡುಕುತ್ತಿದೆ. ಬಾಲಕಿಯ ಸಂಪರ್ಕಕ್ಕೆ ಬಂದಿದ್ದವರಲ್ಲಿ ಈಗಾಗಲೇ 130 ಜನರ ಸ್ವ್ಯಾಬ್ ಕಲೆಕ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಕಾರ್ಯಕ್ರಮದಿಂದಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಟೆನ್ಷನ್ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!