ಸಿಂದಗಿಯಲ್ಲಿ ಸ್ವಯಂ ಟೆಸ್ಟಿಂಗ್ ಮಾಡಿಸಿಕೊಳ್ತಿರುವ ಜನತೆ

817

ಸಿಂದಗಿ: ಕರೋನಾ ವೈರಸ್ ಜನರ ಇಡೀ ಬದುಕಿನ ಮೇಲೆ ಎಷ್ಟೊಂದು ಘನಘೋರ ಪರಿಣಾಮ ಬೀರಿದೆ ಅನ್ನೋದು ಗೊತ್ತಿದೆ. ಹೀಗಾಗಿ ಜನರು ಮನೆಯಿಂದ ಆಚೆ ಬರಲು ಆಗ್ತಿಲ್ಲ. ಲಾಕ್ ಡೌನ್ ನಿಯಮ ಉಲ್ಲಂಘಿಸುವಂತಿಲ್ಲ. ಆದ್ರೆ, ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ತಪಾಸಣೆಗೆ ಬರಹುದು. ಹೀಗಾಗಿ ಯಾರಿಗೆಲ್ಲ ಸೋಂಕಿನ ಬಗ್ಗೆ ಭೀತಿ, ಭಯ, ಅನುಮಾನಗಳಿದ್ರೆ ಸ್ವಯಂ ಆಗಿ ಚೆಕ್ ಮಾಡಿಸಿಕೊಳ್ಳಬಹುದು.

ತಾಲೂಕಿನಲ್ಲಿ ಈಗಾಗ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಟೆಸ್ಟ್ ಮಾಡ್ತದ್ದಾರೆ. ಥರ್ಮಲ್ ಸ್ಕ್ರೀನಿಂಗ್ ಸಹ ಮಾಡಲಾಗಿದೆ. ಬೇರೆ ಊರುಗಳಿಂದ ಬಂದವರು ಸ್ವತಃ ತಾವೇ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಕೆಲವರು ಆ ಕೆಲಸವನ್ನ ಮಾಡ್ತಿದ್ದಾರೆ. ಇದರ ಜೊತೆಗೆ ಇತರರು ಸಹ ಟೆಸ್ಟಿಂಗ್ ಮಾಡಿಸಿಕೊಳ್ಳಬಹುದು.

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಲಾಗ್ತಿದೆ. ಮಾರ್ಚ್ 28 ರಿಂದ ಇಲ್ಲಿಯವರೆಗೂ 700ಕ್ಕೂ ಹೆಚ್ಚು ಜನ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಜ್ವರ ಇದ್ಯಾ ಇಲ್ವಾ ಅನ್ನೋದು ಗೊತ್ತಾಗುತ್ತೆ. ಹೀಗೆ ಸ್ವಯಂ ಆಗಿ ಆಸ್ಪತ್ರೆಗೆ ಹೋಗಿ ಟೆಸ್ಟಿಂಗ್ ಮಾಡಿಸಿಕೊಳ್ಳುವುದ್ರಿಂದ ನಮ್ಮಲ್ಲಿರುವ ಅನುಮಾನಗಳು ದೂರವಾಗುತ್ತವೆ. ಯಾಕಂದ್ರೆ, ಪ್ರತಿಯೊಬ್ಬರು ಟೆಸ್ಟಿಂಗ್ ಮಾಡಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಹೀಗಾಗಿ ಹೊರಗಡೆ ಬರುವಾಗ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಚೆಕ್ ಮಾಡಿಸಿಕೊಳ್ಳುವುದ್ರಿಂದ ನಮ್ಮನ್ನ ಸೇರಿದಂತೆ ಪ್ರತಿಯೊಬ್ಬರಿಗೂ ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!