ಡೆಡ್ಲಿ ಕರೋನಾ: ಹೆತ್ತವರೆ ಮಕ್ಕಳ ಬಗ್ಗೆ ಇರಲಿ ಕಾಳಜಿ

350

ಬೆಂಗಳೂರು: ಕರೋನಾ ವೈರಸ್ ಸೋಂಕು ಯಾರನ್ನ ಬಿಡುತ್ತಿಲ್ಲ ಅನ್ನೋದು ಗೊತ್ತಾಗಿದೆ. ಧರ್ಮ, ಜಾತಿ, ವಯಸ್ಸು, ಲಿಂಗ ಅನ್ನೋ ಯಾವುದೇ ಬೇಧಭಾವ ಇಲ್ಲದೆ ಎಲ್ಲರಲ್ಲಿಯೂ ಕಾಣಿಸಿಕೊಳ್ತಿದೆ. ಹೀಗಾಗಿ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕಿದೆ. ಆತಂಕದ ಸಂಗತಿ ಅಂದ್ರೆ, ಕರುನಾಡಿನಲ್ಲಿ ದಿನದಿಂದ ದಿನಕ್ಕೆ ಮಕ್ಕಳಲ್ಲಿ ಕೋವಿಡ್ 19 ಹೆಚ್ಚಿಗೆ ಕಾಣಿಸಿಕೊಳ್ತಿರುವುದು. ಹೀಗಾಗಿ ಪೋಷಕರು ಈ ಬಗ್ಗೆ ಕಾಳಜಿ ವಹಿಸಬೇಕಿದೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡ್ತಿರುವ ಹೆಲ್ತ್ ಬುಲೆಟಿನ್ ನಲ್ಲಿ ಮಕ್ಕಳು ಸಹ ಕಾಣಿಸಿಕೊಳ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಂದು ಬಿಡುಗಡೆಯಾದ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಲ್ಲಿ ವಿಜಯಪುರ, ಬೆಂಗಳೂರು ಗ್ರಾಮಾಂತರದಲ್ಲಿ 6 ವರ್ಷದ ಇಬ್ಬರು, ಚಿಕ್ಕಬಳ್ಳಾಪುರದಲ್ಲಿ 9 ವರ್ಷದ 1, ಬಳ್ಳಾರಿಯ ಹೊಸಪೇಟೆಯಲ್ಲಿ 10 ವರ್ಷದ 1 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 11 ವರ್ಷದ 1 ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗೆ ದಿನೆದಿನೆ ಮಕ್ಕಳಲ್ಲಿಯೂ ಸೋಂಕು ಹೆಚ್ಚಾಗ್ತಿದೆ. ಇದುವರೆಗೂ 11 ಜಿಲ್ಲೆಗಳಿಂದ 22 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 10 ತಿಂಗಳ ಮಗುವಿನಿಂದ ಹಿಡಿದು 14 ವರ್ಷದ ಮಕ್ಕಳವರೆಗೂ ಕಾಣಿಸಿಕೊಂಡಿದೆ.

ಹಿರಿಯರು ಹಾಗೂ ಮಕ್ಕಳ ಬಗ್ಗೆ ಕುಟುಂಬಸ್ಥರು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಯಾಕಂದ್ರೆ, ಇವರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಗೆ ಇರುವುದಿಲ್ಲ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಬೆಳೆಯುವ ಹಂತದಲ್ಲಿದ್ರೆ, ಹಿರಿಯರಲ್ಲಿ ಕಡಿಮೆಯಾಗ್ತಿರುತ್ತೆ. ಒಂದು ವೇಳೆ ಹೆಚ್ಚಿಗೆ ಇದ್ರೂ ವೈರಸ್ ನೊಂದಿಗೆ ಹೋರಾಡುವ ಶಕ್ತಿಯನ್ನ ಕಳೆದುಕೊಂಡಿರುತ್ತವೆ. ಹೀಗಾಗಿ ಕರೋನಾದಿಂದ ಬಹುಬೇಗ ಅಪಾಯ ಸಂಭವಿಸುವುದು ಇವರಲ್ಲಿ ಹೆಚ್ಚು. ಆದ್ರಿಂದ ನಿಮ್ಮ ಮನೆಯ ಕೆಲಸದ ನಡುವೆ ಮಕ್ಕಳನ್ನ ಮರೆತು ಹೋಗ್ಬೇಡಿ. ಅವರನ್ನ ಎಲ್ಲಿಯೂ ಹೊರಗೆ ಹೋಗದಂತೆ ನೋಡಿಕೊಳ್ಳಿ. ನೀವು ಸಹ ಲಾಕ್ ಡೌನ್ ನಿಯಮವನ್ನ ಮುರಿಯಬೇಡಿ.

ನಂಬರ್ ಜಿಲ್ಲೆ ಸೋಂಕಿತ ಮಕ್ಕಳು
01 ಬೆಂಗಳೂರು ನಗರ 04
02 ಕಲಬುರಗಿ 04
03 ವಿಜಯಪುರ 04
04 ಬಾಗಲಕೋಟೆ 03
05 ಬೆಂಗಳೂರು ಗ್ರಾಮಾಂತರ 01
06 ಮೈಸೂರು 01
07 ಮಂಡ್ಯ 01
08 ತುಮಕೂರು 01
09 ದಕ್ಷಿಣ ಕನ್ನಡ 01
10 ಬೆಳಗಾವಿ 01
11 ಬಳ್ಳಾರಿ 01



Leave a Reply

Your email address will not be published. Required fields are marked *

error: Content is protected !!