ಬೈಕ್ ಹಿಂದೆ ಸ್ಟೈಲ್ ಆಗಿ ಕುಳಿತುಕೊಳ್ಳೋ ಹುಡ್ಗೀರು ಓದಲೇಬೇಕಾದ ಸ್ಟೋರಿ

409

ಇವತ್ತಿನ ಸ್ಟೈಲ್ ಜೀವನದಲ್ಲಿ ಬೈಕ್ ಓಡಿಸುವುದು ಮತ್ತು ಬೈಕ್ ಹಿಂದೆ ಕುಳಿತುಕೊಳ್ಳುವ ಹುಡ್ಗೀಯರ ಸ್ಟೈಲ್ ಸಹ ಒಂದು. ಹೀಗೆ ಬೈಕ್ ಹಿಂದೆ ಕುಳಿತುಕೊಳ್ಳುವ ಹುಡ್ಗಿಯರು ಸ್ವಲ್ಪ ಯೋಚಿಸಿ ಕುಳಿತುಕೊಳ್ಳುವುದು ಉತ್ತಮ. ಅದರಲ್ಲೂ ವೇಲ್ ಹಾರಿಸಿಕೊಂಡು ಹೋಗುವ ಹುಡ್ಗೀರು ತುಂಬಾ ಹುಷಾರ್ ಆಗಿರ್ಬೇಕು.

ಮಹಿಳೆಯೊಬ್ಬರು ಸುತ್ತಿಕೊಂಡಿದ್ದ ವೇಲ್, ಬೈಕ್ ಹಿಂಬದಿಯ ಚಕ್ರದೊಳಗೆ ಸಿಲುಕೊಂಡು ಗಂಭೀರವಾಗಿ ಗಾಯಗೊಂಡ ಘಟನೆಯೊಂದು ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಹರಿದಾಡ್ತಿದೆ. ಆಕೆ ತಲೆ ಕೂದಲು ಸಂಪೂರ್ಣವಾಗಿ ಕಿತ್ತಿಕೊಂಡು ಬಂದಿದ್ದು, ಚಕ್ರಕ್ಕೆ ಸಿಲಿಕೊಂಡಿರುವುದು ಕಾಣಿಸುತ್ತೆ. ಇದನ್ನ ನೋಡಿದ್ರೆ, ಆಕೆ ಜೀವ ಬಾಯಿಗೆ ಬಂದು ಹೋಗಿರುತ್ತೆ.

ಬೈಕ್ ಹಿಂಬದಿ ಚಕ್ರಕ್ಕೆ ಸಿಲಿಕಿರುವ ತಲೆ

ದುಪ್ಪಟವನ್ನ ಕೊರಳಿಗೆ ಹಾಕಿಕೊಂಡು ಮಾರೂದ್ದ ಹಾರಾಡಲು ಬಿಡುವುದು, ತಲೆಗೆ ಹೊದ್ದುಕೊಳ್ಳುವಾಗ ಹಾಗೇ ಬಿಡುವುದು, ಸೀರೆ ಸೆರಗನ್ನ ಸಹ ಕೆಲವರು ಅತಿ ಉದ್ದವಾಗಿ ಬಿಟ್ಟಾಗ ಅದು ಬೈಕ್ ಹಿಂಬದಿಯ ಗಾಲಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚು. ಇದು ಇಬ್ಬರ ಪ್ರಾಣಕ್ಕೂ ಕುತ್ತಾಗುವ ಸಾಧ್ಯತೆಯಿದೆ. ಹೀಗಾಗಿ ಬೈಕ್ ಸವಾರರು ಎಚ್ಚರದಿಂದ ಇರುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!