ಬಂಗಾರದಲ್ಲಿಯೂ ಭಾರತ ಟಾಪ್

371

ಚಿನ್ನ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಈ ಹಳದಿ ಲೋಹದ ಮೋಹ ಯಾರಿಗೂ ಬಿಟ್ಟಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಒಂದಿಷ್ಟು ಚಿನ್ನ ಸಂಗ್ರಹಿಸಬೇಕು ಅಂತಾರೆ. ಅದೇ ರೀತಿ ದೇಶಗಳು ಸಹ ಚಿನ್ನದ ಸಂಗ್ರಹ ಮಾಡ್ತವೆ. ಹೀಗೆ ಸಂಗ್ರಹಿಸಿರುವ ವಿಶ್ವದ ಟಾಪ್ 10 ಪಟ್ಟಿಯಲ್ಲಿ ಭಾರತ ಸಹ ಒಂದು.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಇತ್ತೀಚೆಗೆ ಅಂಕಿಅಂಶಗಳ ವರದಿಯನ್ನ ಬಿಡುಗಡೆ ಮಾಡಿದೆ. ಇದರ ಅನ್ವಯ ಭಾರತ 618.2 ಮೆಟ್ರಿಕ್ ಟನ್ ಚಿನ್ನ ಹೊಂದುವ ಮೂಲಕ ಟಾಪ್ 9 ಸ್ಥಾನದಲ್ಲಿದೆ. ಇದರಲ್ಲಿ ಶೇಕಡ 6.5ರಷ್ಟು ವಿದೇಶಿ ಮೀಸಲು ಇದೆ. ಟಾಪ್ 1ರಲ್ಲಿ ಅಮೆರಿಕವಿದ್ದು ಬರೋಬ್ಬರಿ 8,134 ಮೆಟ್ರಿಕ್ ಟನ್ ಚಿನ್ನವನ್ನ ಹೊಂದಿದೆ.

3,366.8 ಮೆಟ್ರಿಕ್ ಟನ್ ಹೊಂದಿರುವ ಜರ್ಮನ್ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ 2,451.8 ಮೆಟ್ರಿಕ್ ಟನ್ ಹೊಂದಿರುವ ಇಟಲಿಯಿದೆ. 2,436.1 ಮೆಟ್ರಿಕ್ ಟನ್ ಹೊಂದಿರುವ ಫ್ರಾನ್ಸ್ 4ನೇ ಸ್ಥಾನದಲ್ಲಿದೆ. 2,219.2 ಮೆಟ್ರಿಕ್ ಟನ್ ಹೊಂದಿರುವ ರಷ್ಯ 5ನೇ ಸ್ಥಾನದಲ್ಲಿದೆ. 1936.5 ಮೆಟ್ರಿಕ್ ಟನ್ ಹೊಂದಿರುವ ಚೀನಾ 6ನೇ ಸ್ಥಾನದಲ್ಲಿದೆ. 1040 ಮೆಟ್ರಿಕ್ ಟನ್ ಹೊಂದಿರುವ ಸ್ವಿಟ್ಜರ್ಲ್ಯಾಂಡ್ 7ನೇ ಸ್ಥಾನದಲ್ಲಿದೆ. 765.2 ಮೆಟ್ರಿಕ್ ಟನ್ ಹೊಂದಿರುವ ಜಪಾನ್ 8ನೇ ಸ್ಥಾನದಲ್ಲಿದೆ. 612.5 ಮೆಟ್ರಿಕ್ ಟನ್ ಚಿನ್ನ ಹೊಂದಿರುವ ನೆದರ್ಲ್ಯಾಂಡ್ 10ನೇ ಸ್ಥಾನದಲ್ಲಿದೆ.




Leave a Reply

Your email address will not be published. Required fields are marked *

error: Content is protected !!