ಮಾಸ್ಕ್ ವಿಚಾರಕ್ಕೆ ದಂಪತಿ ಗಲಾಟೆ: ಬಂಧನವಾಗ್ತಿದ್ದಂತೆ ಪತ್ನಿ ಕಡೆ ಬೊಟ್ಟು ಮಾಡಿದ ಪತಿ

281

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ ಭಾನುವಾರ ನವದೆಹಲಿಯ ದರ್ಯಾಗಂಜ್ ನಲ್ಲಿ ದಂಪತಿಯೊಬ್ಬರು ಕಾರಿನಲ್ಲಿ ಹೋಗ್ತಿರುವಾಗ ಮಾಸ್ಕ್ ಧರಿಸಿರ್ಲಿಲ್ಲ. ಹೀಗಾಗಿ ಪೊಲೀಸರು ಅವರನ್ನ ತೆಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕಾರಿನಲ್ಲಿದ್ದ ಮಹಿಳೆ ಹಾಗೂ ಆಕೆ ಪತಿ ಪೊಲೀಸರಿಗೆ ಆವಾಜ್ ಹಾಕಿದ್ರು. ನನ್ನ ಗಂಡನಿಗೆ ನಾನು ಮುತ್ತು ಕೊಡುತ್ತೇನೆ. ನೀವು ತಪ್ಪಿಸ್ತೀರಾ ಎಂದೆಲ್ಲ ಮಾತ್ನಾಡಿದ್ದಳು.

ಇದೀಗ ಪಂಕಜ ಹಾಗೂ ಆಭಾ ಗುಪ್ತ ದಂಪತಿಯ ಬಂಧನವಾಗಿದೆ. ಬಂಧನದ ಬಳಿಕ ಪತಿ ಉಲ್ಟಾ ಹೊಡೆದಿದ್ದಾನೆ. ಈ ಘಟನೆಗೆಲ್ಲ ಪತ್ನಿಯೇ ಕಾರಣ. ನನ್ನ ಪತ್ನಿಯದ್ದೆ ತಪ್ಪಿದೆ. ನಾನು ಮಾಸ್ಕ್ ಹಾಕಿಕೊಳ್ಳಲು ಸಹ ಆಕೆ ಬಿಡ್ಲಿಲ್ಲ ಎಂದಿದ್ದಾನೆ. ಕಾರಿನಲ್ಲಿ ಒಬ್ಬರೆ ಇದ್ದರೂ ಮಾಸ್ಕ್ ಹಾಕಬೇಕು ಎಂದು ದೆಹಲಿ ಹೈಕೋರ್ಟ್ ಏಪ್ರಿಲ್ ಮೊದಲ ವಾರದಲ್ಲೇ ಹೇಳಿದೆ.




Leave a Reply

Your email address will not be published. Required fields are marked *

error: Content is protected !!