ಕೋವಿಡ್ ಸರ್ವಪಕ್ಷ ಸಭೆಯಲ್ಲಿ ಮೋದಿಗೆ ಐದು ಸಲಹೆ ನೀಡಿದ ಸೋನಿಯಾ

458

ನವದೆಹಲಿ: ಪ್ರಧಾನಿ ಮೋದಿ, ಕರೋನಾ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ಕರೆದಿದ್ರು. ಇದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಮೋದಿಗೆ ಐದು ಸಲಹೆಗಳನ್ನ ನೀಡಿದ್ದಾರೆ.

  1. ಮೊದಲು ಎಲ್ಲ ಮೀಡಿಯಾಗಳಿಗೆ ನೀಡ್ತಿರುವ ಸಾರ್ವಜನಿಕರ, ಅರೆಸಾರ್ವಜನಿಕ ಹಾಗೂ ಸರ್ಕಾರಿ ಜಾಹೀರಾತುಗಳನ್ನ 2 ವರ್ಷ ನಿಲ್ಲಿಸಬೇಕು. ಇದ್ರಿಂದ ಉಳಿಯುವ 1,125 ಕೋಟಿ ಇದಕ್ಕೆ ಬಳಸಿಕೊಳ್ಳಿ.
  2. ಇದೀಗ ನಿರ್ಮಾಣಕ್ಕೆ ಕೈಹಾಕಿರುವ ಪಾರ್ಲಿಮೆಂಟ್ ಇತ್ಯಾದಿ ಕಾಮಗಾರಿಗಳನ್ನ ನಿಲ್ಲಿಸಿ. ಅವುಗಳ ಪಾಲಿನ 20 ಸಾವಿರ ಕೋಟಿ ಹಣವನ್ನ PPE ಕಿಟ್ ಹಾಗೂ ಪರೀಕ್ಷಾ ಕಿಟ್ ಮಾಸ್ಕ್ ಖರೀದಿಗೆ ಬಳಸಿ.
  3. ಸರ್ಕಾರಿ ವೆಚ್ಚಗಳನ್ನ ಶೇಕಡ 30ರಷ್ಟು ಕಡಿತಗೊಳಿಸಿ. ಇದ್ರಿಂದ ಉಳಿಯುವ 2.5 ಲಕ್ಷ ಕೋಟಿ ರೂಪಾಯಿಗಳನ್ನ ಅಸಂಘಟಿತ ವಲಯ, ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಬಡವರಿಗೆ ನೀಡಿ ಆರ್ಥಿಕ ಶಕ್ತಿ ತುಂಬಿ.
  4. ಪ್ರಧಾನಿ ಸಂಪುಟದ ಸಚಿವರು, ಸಂಸದರು, ಅಧಿಕಾರಿಗಳು, ಮುಖ್ಯಮಂತ್ರಿಗಳ ವಿದೇಶಿ ಪ್ರವಾಸಗಳನ್ನ ರದ್ದುಗೊಳಿಸಿ. ಅವರ ಪ್ರವಾಸ ಭತ್ಯೆಗಳನ್ನ ಪ್ರಸ್ತತ ಪರಿಸ್ಥಿತಿ ನಿಯಂತ್ರಣಕ್ಕೆ ಬಳಸಿಕೊಳ್ಳಿ.
  5. PM CARES ನಿಧಿಗೆ ಬಂದಿರುವ ಹಣವನ್ನ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಗೆ ವರ್ಗಾಯಿಸಿ. ಅದರ ಮೂಲಕ ಜನರ ಸೇವೆಗೆ ಉಪಯೋಗಿಸಿ.

ಪ್ರತಿಯೊಬ್ಬರು ಇಂದು ಕರೋನಾ ವಿರುದ್ಧ ಹೋರಾಡ್ತಿದ್ದು, ನಿಮ್ಮ ಸಲಹೆ ಸೂಚನೆಗಳನ್ನ ಪಾಲಿಸುತ್ತಾರೆ. ಅವರು ನೀಡಿರುವ ಹಣ ಅವರಿಗೆ ಇಂಥಾ ಸಂದರ್ಭದಲ್ಲಿ ಸಿಗುವಂತೆ ಮಾಡಿ ಅನ್ನೋ ಪ್ರಮುಖ 5 ಸಲಹೆಗಳನ್ನ ಮೋದಿಗೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!