ಅನಗತ್ಯ ಓಡಾಟ ನಿಲ್ಲಿಸಿ: ಆರ್.ಅಶೋಕ

300

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರೋನಾ ಆರ್ಭಟ ಜೋರಾಗಿದೆ. ಜೂನ್ 19ರ ವರೆಗಿನ ವರದಿ ಪ್ರಕಾರ, 982 ಪ್ರಕರಣಗಳು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 43 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಕಂದಾಯ ಸಚಿವ ಆರ್.ಅಶೋಕ ಮಾತ್ನಾಡಿದ್ದು, ಅನಗತ್ಯವಾಗಿ ಜನರು ಓಡಾಟ ಮಾಡಬಾರದು ಎಂದಿದ್ದಾರೆ.

ಇನ್ನು ನಗರದಲ್ಲಿ 58 ಜನ, ಗ್ರಾಮಾಂತರದಲ್ಲಿ 1 ಸಾವು ಸಂಭವಿಸಿದೆ. ಹೀಗಾಗಿ ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಆರ್.ಅಶೋಕ, ಅನಗತ್ಯ ಓಡಾಟ ನಿಲ್ಲಿಸಿ. ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ವ್ಯವಹಾರ ಮಾಡಿ. ಯಾಕಂದ್ರೆ, ನಗರದಲ್ಲಿ ಸೋಂಕಿನ ಜೊತೆಗೆ ಸಾವಿನ ಪ್ರಕರಣಗಳು ಹೆಚ್ಚಾಗ್ತಿವೆ. ಆದರಿಂದ ಜನರು ಎಚ್ಚರಿಕೆಯಿಂದ ಇರಬೇಕು. ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಿ ಎಂದು ಮನವಿ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!