ವನಮಹೋತ್ಸವ ಒಂದು ದಿನಕ್ಕೆ ಸೀಮಿತವಾಗದಿರಲಿ: ನಗನೂರ

1306

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯ್ತು. ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಸ್ ನಗನೂರ, ಸಸಿಗೆ ನೀರೂಣಿಸಿ ಮಾತ್ನಾಡಿದ್ರು. ವನಮಹೋತ್ಸವ ಕಾರ್ಯಕ್ರಮವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿರಲಿ ಎಂದು ಹೇಳಿದರು.

ಮುಖ್ಯ ಅತಿಥಿ ಉಪ ವಲಯ ಅರಣ್ಯಾಧಿಕಾರಿ ಎಂ ಎಲ್ ಮುಲ್ಲಾ ಮಾತ್ನಾಡಿ, ಸಕಾಲಕ್ಕೆ ಮಳೆ ಬರಲು ಮರ ಗಿಡ ಬೆಳೆಸುವುದು ಅಗತ್ಯವಾಗಿದೆ. ಶಾಲೆಗೆ ಬರುವ ಮಕ್ಕಳ ಪಾಲಕರಿಗೆ ಮನೆ ಮುಂದೆ ಮರ ಗಿಡಗಳನ್ನು ಹಚ್ಚಲು ಅರಿವು ಮೂಡಿಸುವುದು ಅನಿವಾರ್ಯವಾಗಿದೆ ಎಂದರು.

ಈ ವೇಳೆ ಸಿಂದಗಿ ತಾಲೂಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಎಚ್ ಬಿರಾದಾರ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಎಸ್ ಚೌದ್ರಿ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ ಬಿ ಗಡಗ, ಕಾನಿಪ ಅಧ್ಯಕ್ಷ ಆನಂದ ಶಹಬಾದಿ, ಶಾಲೆ ಮುಖ್ಯಗುರುಗಳಾದ ಎಸ್ ಜಿ ಶಹಾಪುರ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶರಣಬಸವ ಲಂಗೋಟಿ, ಸಂಪನ್ಮೂಲ ಶಿಕ್ಷಕ ಬಸವರಾಜ ಭೂತಿ, ಮಲ್ಲಿಕಾರ್ಜುನ ಮೂಲಿ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವಿ.ಕೆ ಕುಲಕರ್ಣಿ, ಶಿವಾನಂದ ಅವಟಿ, ಸಂಗೀತಾ ಕೆ, ಗೀತಾ ಅಥಣಿ, ಎಸ್. ಜೆ ಕೊಳೇಕರ, ಎಸ್ ಎಸ್ ಕೇಸರಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!