ಕರೋನಾ ಕಂಟ್ರೋಲ್ ವಿಚಾರದಲ್ಲಿ ಸರ್ಕಾರ ಯಡವಟ್ಟು ಆರೋಪ

321

ಬೆಂಗಳೂರು: ಮಹಾಮಾರಿ ಕರೋನಾ ವೈರಸ್ ಕಂಟ್ರೋಲ್ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಒಂದಿಷ್ಟು ಯಡವಟ್ಟುಗಳನ್ನ ಮಾಡ್ತಿದೆ ಎಂದು ಸ್ವತಃ ವೈದ್ಯರೇ ಆರೋಪ ಮಾಡಿದ್ದಾರೆ. ಕರೋನಾ ಶಂಕಿತರನ್ನ ಐಸೋಲೇಟ್ ಮಾಡುವಲ್ಲಿ ಇಲಾಖೆ ವಿಫಲವಾಗ್ತಿದೆ ಎಂದು ವೈದ್ಯರು ಆರೋಪಿಸಿದ್ದಾರೆ.

ಡಿಸಿಗಳು, ಡಿಎಚ್ಒಗಳು ಮತ್ತು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರುಗಳ ವಿರುದ್ದ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಲ್ ಆಸ್ಪತ್ರೆಗಳಲ್ಲಿ ಕರೋನಾ ಪರೀಕ್ಷೆ ಮಾಡುವಂತಿಲ್ಲ, ಆದರೆ ಮಾಡಲಾಗ್ತಿದೆ. ಪ್ರತ್ಯೇಕ ಕಟ್ಟಡದಲ್ಲಿ ಐಸೋಲೇಷನ್‌ ವಾರ್ಡ್ ಮಾಡುವ ಬದಲು ಜನರಲ್ ಆಸ್ಪತ್ರೆಗಳಲ್ಲೇ ಪರೀಕ್ಷೆ ನಡೆಸಲಾಗ್ತಿದೆ. ಉದಾಹರಣೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್ ಒಂದು ಕಡೆ, ಲ್ಯಾಬ್ ಒಂದು ಕಡೆ, ವಾರ್ಡ್ ಮತ್ತೊಂದು ಕಡೆ ಇದೆ. ಹೀಗಾಗಿ ಶಂಕಿತ ಸೋಂಕಿತರು ಆಸ್ಪತ್ರೆ ತುಂಬಾ ಓಡಾಡುತ್ತಿದ್ದಾರೆ, ಇದರಿಂದ ಹಲವು ವೈದ್ಯರಲ್ಲು ಸೋಂಕಿನ ಲಕ್ಷಣಗಳು ಕಂಡು ಬಂದಿವೆ ಎಂದು ವೈದ್ಯರು ಆರೋಪಿಸಿದ್ದಾರೆ.

ಎಲ್ಲ ಮೆಡಿಕಲ್ ಕಾಲೇಜುಗಳಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಅಲರ್ಟ್ ಆಗ್ತಿಲ್ಲ. ರಿಪೋರ್ಟ್ ಬರೋವರೆಗೆ ಸೋಂಕಿನ ಲಕ್ಷಣ ಇರುವರನ್ನು  ಜನರಲ್ ವಾರ್ಡ್ ಗಳಲ್ಲೇ ಅಡ್ಮಿಟ್ ಮಾಡಲಾಗ್ತಿದೆ. ಇದರಿಂದ‌ ಜನರಲ್ ವಾರ್ಡ್ ಗಳಲ್ಲಿ ಮೊದಲೇ ಸೂಕ್ಷ್ಮ ರೋಗಿಗಳಿದ್ದು ಅವರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಏರ್ಪೋರ್ಟ್ ಪಕ್ಕವೇ ಐಸೋಲೇಷನ್ ವಾರ್ಡ್ ನಿರ್ಮಿಸಿದ್ರೆ ಹರಡುತ್ತಿರಲಿಲ್ಲ, ಈಗ್ಲಾದ್ರೂ ಇದನ್ನ ಮಾಡಬೇಕು ಎಂದು ವೈದ್ಯರ ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!