ನಗರ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ತಡೆ

452

ಬೆಂಗಳೂರು: ರಾಜ್ಯದ 58 ನಗರ ಸಭೆ, 117 ಪುರಸಭೆ ಹಾಗೂ 93 ಪಟ್ಟಣ ಪಂಚಾಯ್ತಿ ಸೇರಿದಂತೆ 268 ನಗರ ಸ್ಥಳೀಯ ಅಧ್ಯಕ್ಷ ಹಾಗೂ ಉಪಾಧ್ಯಾಕ್ಷರ ಚುನಾವಣೆಗೆ ಇದೀಗ ಕಂಟಕ ಎದುರಾಗಿದೆ ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಾಕ್ಷ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದೆ.

ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲಾಗಿದೆ. ಆದ್ರಿಂದ ಸರ್ಕಾರಕ್ಕೆ ಹೈಕೋರ್ಟ್ ಆದೇಶದ ನೀಡಿದ್ದು, ಏಪ್ರಿಲ್ 1ಕ್ಕೆ ವಿಚಾರಣೆಯನ್ನ ಮುಂದೂಡಿದೆ. ಮೀಸಲು ನಿಗದಿಪಡಿಸಿ 2020ರ ಮಾರ್ಚ್ 11 ರಂದು ಹೊರಡಿಸಿರುವ ಅಧಿಸೂಚನೆ ಸಂಬಂಧ ಸದ್ಯ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಓದುಗರ ಗಮನಕ್ಕೆ

ಹೈಕೋರ್ಟ್ ಆದೇಶದಿಂದಾಗಿ ಚುನಾವಣೆ ಮುಗಿದು ನೆನೆಗುದಿಗೆ ಬಿದ್ದರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬವಾಗಲಿದೆ. 2011ರ ಜನಸಂಖ್ಯೆ ಹಾಗೂ ಮೀಸಲು ರೋಟೇಷನ್ ಲೆಕ್ಕಚಾರದಲ್ಲಿ ದಾಂಡೇಲಿ, ಗದಗ, ಮತ್ತು ಇಳಕಲ್ ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ ಟಿ ಮಹಿಳೆ ಆಗಬೇಕಿತ್ತು. ಬದಲಿಗೆ ಸಿಂಧನೂರು ನಗರ ಸಭೆಗೆ ಮಾತ್ರ ಮಹಿಳೆ ಮೀಸಲು ನಿಗದಿಪಡಿಸಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ. ಹೀಗಾಗಿ ಇದೀಗ ಇದರ ವಿಚಾರಣೆ ನಡೆಯುತ್ತಿದ್ದು ಏಪ್ರಿಲ್ 1ಕ್ಕೆ ಮುಂದೂಡಲಾಗಿದೆ.




Leave a Reply

Your email address will not be published. Required fields are marked *

error: Content is protected !!