ಲಾಕ್ ಡೌನ್ ಘೋಷಣೆಯಷ್ಟೇ.. ಮುಂಜಾನೆಯ 4 ಗಂಟೆ ದುರ್ಬಳಕೆ

257

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ ಏನೇ ಹೇಳಿದ್ರೂ ಸಹ ಸಾರ್ವಜನಿಕರ ಸ್ಪಂದನೆ ಸರಿಯಾಗಿಲ್ಲ. ಮುಂಜಾನೆ 4 ಗಂಟೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟರೆ, ಅದನ್ನ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ.

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯ ತನಕ ಕಾಲಾವಕಾಶ ನೀಡಲಾಗಿದೆ. ಈ ಅವಕಾಶವನ್ನ ಜನರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಓಡಾಟ, ಮಾರುಕಟ್ಟೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರ್ತಿದ್ದಾರೆ. ಪರವಾನಿಗೆ ನೀಡದ ಅಂಗಡ ಮುಂಗಟ್ಟುಗಳು ಸಹ ವ್ಯಾಪಾರ ವಹಿವಾಟ ನಡೆಸ್ತಿವೆ. ಆದ್ರೆ, ಅಧಿಕಾರಿಗಳು ಸಹ ಇಲ್ಲಿ ಯಡವತ್ತಿರುವುದು ಸ್ಪಷ್ಟವಾಗಿದೆ.

10 ಗಂಟೆಯ ಬಳಿಕವೂ ಜನರ ಓಡಾಟ ಜೋರಾಗಿದೆ. ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸ್ತಿವೆ. ಕೇವಲ ಬೆಂಗಳೂರು ಬಗ್ಗೆ ಕಟ್ಟುನಿಟ್ಟಿನ ಕ್ರಮ ಅಂದ್ರೆ ಸಾಲದು, ಉಳಿದ ಜಿಲ್ಲೆಗಳಲ್ಲಿ ಎಲ್ಲವೂ ಉಲ್ಟಾ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!