ಕೋವಿಡ್ ಲಸಿಕೆ ಪಡೆದ 52 ಜನರಿಗೆ ಅಡ್ಡಪರಿಣಾಮ!

365

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದ ಅತಿ ದೊಡ್ಡ ಕೋವಿಡ್ ಲಸಿಕೆ ಆಂದೋಲನಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಮೊದಲ ಹಂತದ ಅಭಿಯಾನದಲ್ಲಿ ಡಿ ದರ್ಜೆಯ ನೌಕರರು ಸೇರಿದಂತೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗ್ತಿದೆ. ಯಶಸ್ವಿ ಅಭಿಯಾನದ ನಡುವೆ ಶಾಕಿಂಗ್ ನ್ಯೂಸ್ ವೊಂದು ಹೊರ ಬಿದ್ದಿದೆ.

ಕೋವಿಡ್ ಲಸಿಕೆ ಪಡೆದವರಲ್ಲಿ ದೆಹಲಿಯ 52 ಜನ ಆರೋಗ್ಯ ಕಾರ್ಯಕರ್ತರಲ್ಲಿ ಅಡ್ಡಿ ಪರಿಣಾಮ ಬೀರಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ದಹಲಿಯ ದಕ್ಷಿಣ ಹಾಗೂ ನೈರುತ್ಯ  ಜಿಲ್ಲೆಗಳಲ್ಲಿ ತಲಾ 11 ಕೇಸ್, ಪೂರ್ವ, ಪಶ್ಚಿಮದಲ್ಲಿ ತಲಾ 6, ಆಗ್ನೇಯ ಹಾಗೂ ನವದೆಹಲಿಯಲ್ಲಿ ತಲಾ 5, ವಾಯುವ್ಯ ದೆಹಲಿ 4, ಮಧ್ಯ ದೆಹಲಿ 2, ಉತ್ತರ ದೆಹಲಿಯಲ್ಲಿ 1 ಪ್ರಕರಣ ವರದಿಯಾಗಿದೆಯಂತೆ.

ಒರ್ವ ವ್ಯಕ್ತಿಯಲ್ಲಿ ತೀವ್ರ ಪ್ರತಿಕೂಲ ಪರಿಸ್ಥಿತಿ ಕಂಡು ಬಂದಿದ್ದು ಏಮ್ಸ್ ಗೆ ದಾಖಲಿಸಲಾಗಿದೆ. ಲಸಿಕೆ ಪಡೆದ ಬಳಿಕ ಕೆಲವರಿಗೆ ಉಸಿರಾಟದ ತೊಂದರೆ, ತಲೆನೋವು, ಟ್ಯಾಕಿಕಾರ್ಡಿಯಾ ಕಾಣಿಸಿಕೊಂಡಿದೆಯಂತೆ.




Leave a Reply

Your email address will not be published. Required fields are marked *

error: Content is protected !!