ಲಾಕ್ ಡೌನ್ ಗೆ ಕ್ಯಾರೆ ಅನ್ನದ ಸಿಂದಗಿ ಜನತೆ..!

738

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಜನತೆಗೆ ಕರೋನಾದ ಗಂಭೀರತೆ ಅರ್ಥವಾಗಿಲ್ಲ ಅನಿಸುತ್ತೆ. ಹೀಗಾಗಿ 144 ಸೆಕ್ಷನ್ ಜಾರಿಯಲ್ಲಿದ್ರೂ ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಸಿದ್ದಾರೆ. ಅಲ್ದೇ ಜನರ ಓಡಾಟ ಸಹ ನಡೆದಿದೆ.

ದಯವಿಟ್ಟಯ ಆಚೆ ಬರಬೇಡಿ

ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಸವಾರರು, ಕಾರ್, ಜೀಪ್, ಟ್ರ್ಯಾಕ್ಟರ್ ಓಡಾಟ ನಡೆಯುತ್ತಿದೆ. ಕಾಲೇಜ್ ರೋಡ್, ವಿವೇಕಾನಂದ ಸರ್ಕಲ್, ಗೋಲಗೇರಿ ನಾಕಾ, ವಿಜಯಪುರ ರೋಡ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಾಣಿಸ್ತಿದೆ.

ಇನ್ನು ಪುರಸಭೆ ಮುಂದೆಯೇ ಭರ್ಜರಿ ವ್ಯಾಪಾರ ನಡೆದಿದೆ. ಇನ್ನು ಟಿಪ್ಪು ಸುಲ್ತಾನ್ ಚೌಕ್ ಸುತ್ತಮುತ್ತ, ತೋಂಟದ ಶ್ರೀಗಳ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆದಿದೆ. ಪೊಲೀಸ್ ಇಲಾಖೆಯಿಂದ ಆಟೋ ಪ್ರಚಾರ ನಡೆದಿದೆ ಆದ್ರೆ, ಇದಕ್ಕೆ ಜನ ಕ್ಯಾರೆ ಅಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್, ಪಿಎಸ್ಐ, ಸಿಪಿಐ ಅಧಿಕಾರಿಗಳು ಏನ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ. 144 ಸೆಕ್ಷನ್ ಅಂದ್ರೆ ಇದೇನಾ? ಕರ್ನಾಟಕ ಲಾಕ್ ಡೌನ್ ಆಗಿರೋದು ಅಂದ್ರೆ ಇದೇನಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!