ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕ್ರಿಕೆಟ್ ಮೈದಾನದಲ್ಲಿ ಭರ್ಜರಿ ಬ್ಯಾಟ್ ಬೀಸುವ, ಕೂಲ್ ಕ್ಯಾಪ್ಟನ್ ಎಂದೇ ಕರೆಸಿಕೊಳ್ಳುವ ಎಂ.ಎಸ್ ಧೋನಿ ಸಿನಿ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ, ತೆರೆಯ ಮೇಲೆ ಅವರು ಕಾಣಿಸಿಕೊಳ್ಳುತ್ತಿಲ್ಲ. ಅಂದರೆ, ಸಿನಿಮಾ ನಿರ್ಮಾಣಕ್ಕೆ ಧೋನಿ ಮುಂದಾಗಿದ್ದಾರೆ.
ತಮ್ಮದೆ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರ ನಿರ್ಮಿಸಲು ಸಜ್ಜಾಗಿದ್ದಾರೆ. ಮೊದಲ ಚಿತ್ರದಲ್ಲಿ ಸೌಥ್ ಸಿನಿ ದುನಿಯಾದ ಲೇಡಿ ಸೂಪರ್ ಸ್ಟಾರ್ ನಯನತಾರಾ ಕಾಣಿಸಿಕೊಳ್ಳಲಿದ್ದಾರಂತೆ. ಮಹಿಳಾ ಪ್ರಧಾನ ಕಥೆಯಾಗಿರುವುದರಿಂದ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಚರ್ಚೆ ನಡೆದಿದೆ. ಇದಕ್ಕೆ ಕೂಲ್ ಕ್ಯಾಪ್ಟನ್ ಉತ್ತರ ಕೊಡಬೇಕಿದೆ.
ಈಗಾಗ್ಲೇ ಎಂ.ಎಸ್ ಧೋನಿ ಜೀವನಗಾಥೆಯು ಬೆಳ್ಳಿ ಪರದೆಯ ಮೇಲೆ ಮೂಡಿ ಬಂದಿದೆ. ದಿವಂಗತ ಸುಶಾಂತ್ ಸಿಂಗ್ ರಾಜಪೂತ್ ನಟಿಸಿದ್ದಾರೆ. ಇನ್ನು ಧೋನಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಕ್ಷೇತ್ರ ಹೊಸದಲ್ಲ ಎನ್ನಬಹುದು.