ಗುಜರಾತಿನಲ್ಲಿ ಭಾರೀ ಚಂಡಮಾರುತ

418

ಗುಜರಾತ್: ಗುಜರಾತಿನಲ್ಲಿ ಭರ್ಜರಿಯಾಗಿ ಚಂಡಮಾರುತ ಬೀಸ್ತಿದ್ದು, ಬರೋಬ್ಬರಿ 3 ಲಕ್ಷ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗ್ತಿದೆ. ಇಂದು ಬೆಳ್ಳಂಬೆಳಗ್ಗೆಯಿಂದಲೇ ವಾಯು ಚಂಡಮಾರುತ ತನ್ನ ಪ್ರತಾಪ ತೋರಿಸ್ತಿದೆ.

ಗುಜರಾತಿನ ಬಹುತೇಕ ಜಿಲ್ಲೆಗಳಲ್ಲಿ ವಾಯು ಚಂಡಮಾರುತ ಪ್ರಭಾವ ಬೀರಿದ್ದು, ಮುಂದಿನ 12 ಗಂಟೆಗಳಲ್ಲಿ ಇದರ ಪರಿಣಾಮ ಹೆಚ್ಚಾಗಲಿದೆ ಅಂತಾ ಐಎಂಡಿ ತಿಳಿಸಿದೆ. ಮಧ್ಯ ಮತ್ತು ಪೂರ್ವ ಈಶಾನ್ಯ ಅರೇಬಿಯನ್ ಸಮುದ್ರ ಹಾಗೂ ಗುಜರಾತ್ ಕರಾವಳಿ ಪ್ರದೇಶದಲ್ಲಿ ಹಾಗೂ ಉತ್ತರ ಅರೇಬಿಯನ್ ಸಮುದ್ರದಲ್ಲಿ ಜೂನ್ 13ರಿಂದ 15ರ ತನಕ ಚಂಡಮಾರುತ ಎಫೆಕ್ಟ್ ಇರುತ್ತೆ ಅಂತಾ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗಂಟೆಗೆ 155ರಿಂದ 165ರ ಸ್ಪೀಡ್ ನಲ್ಲಿ ಗಾಳಿ ಬೀಸ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳಿ ಅಂತಾ ಗುಜರಾತ್ ಸರ್ಕಾರಕ್ಕೆ ತಿಳಿಸಿದೆ. ಅಲ್ದೇ ಈಗಾಗ್ಲೇ ಎನ್ ಡಿಆರ್ಎಫ್ ತಂಡವನ್ನ ಸಹ ಕಳುಹಿಸಲಾಗಿದೆ. ಇದರ ಪ್ರಭಾವ ಉಳಿದ ರಾಜ್ಯಗಳ ಮೇಲೂ ಆಗಲಿದ್ದು ಈಗಾಗ್ಲೇ ನಿನ್ನೆ ಮಹಾರಾಷ್ಟ್ರದಲ್ಲಿ ಭರ್ಜರಿ ಮಳೆಯಾಗಿದೆ.


TAG


Leave a Reply

Your email address will not be published. Required fields are marked *

error: Content is protected !!