ನಾಯಿ ದಾಳಿಗೆ 20 ಸಾವಿರ ಮೌಲ್ಯದ ಕುರಿಗಳು ಬಲಿ

524

ಇಂಡಿ: ತಾಲೂಕಿನ ಹಳಗುಣಕಿ ಗ್ರಾಮದಲ್ಲಿನ ಕುರಿಗಳ ಮೇಲೆ ನಾಯಿಗಳು ನಡೆಸಿದ ದಾಳಿಯಿಂದ ಸುಮಾರು 20 ಸಾವಿರ ಮೌಲ್ಯದ ಕುರಿಗಳು ಸಾವನ್ನಪ್ಪಿವೆ. ಇಂದು ಬೆಳಗ್ಗೆ ಸುಮಾರು 7ಗಂಟೆಯ ಟೈಂನಲ್ಲಿ ರೈತ ಮಲ್ಲಿಕಾರ್ಜುನ ದಶವಂತ ಎಂಬುವರ ಜೋಳದ ಹೊಲದಲ್ಲಿ ಈ ಘಟನೆ ನಡೆದಿದೆ.

ಬೆಳೆಗೆ ನೀರು ಹಾಯಿಸಲು ಹೋದಾಗ ಯಾರು ಇರದನ್ನ ಕಂಡ ಎರಡು ನಾಯಿಗಳಿಂದ ದಾಳಿ ನಡೆದಿದೆ ಎನ್ನಲಾಗ್ತಿದೆ. ಪಕ್ಕದ ಹೊಲದ ಹಣಮಂತ್ರಾಯ ಬಿರಾದಾರ ಇವರ ಸಾಕು ನಾಯಿಗಳಿಂದ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಹಿಂದೆ ಸಹ ಹಲವರ ಕುರಿಗಳನ್ನ ಕೂಡಾ ಬಲಿತೆಗೆದುಕೊಂಡಿದ್ದವು. ಈ ಬಗ್ಗೆ ನಾಯಿಯ ಮಾಲೀಕರಿಗೆ ಸಾಕಷ್ಟು ಸಾರಿ ಸಾರ್ವಜನಿಕರು ಹೇಳಿದ್ರೂ ಸ್ಪಂದಿಸಿಲ್ಲ. ಸಾಕು ನಾಯಿಯ ಮಾಲೀಕರ ಮೇಲೆ ಕ್ರಮತೆಗೆದುಕೊಂಡು ನಮ್ಗೆ ನ್ಯಾಯ ಕೊಡಿಸಿ ಅಂತ ಹೊರ್ತಿ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಲಾಗಿದೆˌ




Leave a Reply

Your email address will not be published. Required fields are marked *

error: Content is protected !!