ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದರೆ ಜೈಲು ಫಿಕ್ಸ್!

687

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇವತ್ತಿನ ಟೆಕ್ನಿಕಲ್ ಲೈಫ್ ನಲ್ಲಿ ಏನೇ ಡೌಟ್ ಬಂದರೂ, ಪ್ರಶ್ನೆ ಎದುರಾದರೂ ಗೂಗಲ್ ಸರ್ಚ್ ಮಾಡುವುದು ಕಾಮನ್ ಆಗಿದೆ. ಪ್ರತಿಯೊಬ್ಬರ ಕೈಯಲ್ಲಿ ಇವತ್ತು ಆಂಡ್ರಾಯ್ಡ್ ಫೋನ್ ಇರುವುದರಿಂದ ಗೂಗಲ್ ನಲ್ಲಿ ಹುಡುಕುವುದು ಸಹಜವಾಗಿದೆ. ಆದರೆ, ಏನು ಹುಡುಕಬಾರದು ಅನ್ನೋದು ಸಹ ತಿಳಿಯಬೇಕಿದೆ.

ಗೂಗಲ್ ನಲ್ಲಿ ನೀವು ತಮಾಷೆಗೂ ಸಹ ಬಾಂಬ್ ತಯಾರಿಸುವುದು ಹೇಗೆ ಎಂದು ಹುಡುಕಬೇಡಿ. ಹಾಗೇನಾದರೂ ಮಾಡಿದರೆ ಭದ್ರತಾ ಏಜೆನ್ಸಿಗಳಿಗೆ ನಿಮ್ಮ ಮಾಹಿತಿ ಹೋಗುತ್ತೆ. ಜೈಲಿಗೆ ಹೋಗಬಹುದು. ಮೊದಲ ದಿನವೇ ಬಿಡುಗಡೆಯಾದ ಚಿತ್ರಗಳ ಸೋರಿಕೆ ಹಾಗೂ ಪೈರಸಿ ಹಾಗೂ ಡೌನೋಲ್ಡ್ ಮಾಡಿಕೊಳ್ಳುವುದು ಸಹ ಅಪರಾಧ.

ಇನ್ನು ಗರ್ಭಪಾತ ಮಾಡಿಸುವುದು ಹೇಗೆ ಅನ್ನೋ ವಿಚಾರ. ಇದು ದೇಶದಲ್ಲಿ ಕಾನೂನು ಬಾಹಿರವಾಗಿದೆ. ಹೀಗಾಗಿ ಇದಕ್ಕೆ ಕಠಿಣ ಶಿಕ್ಷೆಯಿದೆ. ಇನ್ನು ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ಸೇರಿದಂತೆ ಇತರರ ಖಾಸಗಿ ವಿಡಿಯೋಗಳ ಹುಡುಕಾಟ ನಡೆಸಿದರೂ ಜೈಲಿಗೆ ಹೋಗುವುದು ಫಿಕ್ಸ್. ಹೀಗೆ ಸುಮಾರು 21 ವಿಚಾರಗಳ ಕುರಿತು ಭಾರತ ಸರ್ಕಾರು ತುಂಬಾ ಕಟ್ಟುನಿಟ್ಟಾಗಿದೆ. ಹೀಗಾಗಿ ಕೆಲವೊಂದು ವಿಚಾರಗಳ ಕುರಿತು ಗೂಗಲ್ ನಲ್ಲಿ ಸರ್ಚ್ ಮಾಡುವ ಸಹವಾಸಕ್ಕೆ ಹೋಗಬೇಡಿ.




Leave a Reply

Your email address will not be published. Required fields are marked *

error: Content is protected !!