ಶರಣರ ನಾಡಿನಲ್ಲಿ ಡಬಲ್ ಮರ್ಡರ್

448

ಕಲಬುರಗಿ: ಕಲಬುರಗಿಯಲ್ಲಿ ನಡೆದ ಭೀಕರ ಡಬಲ್ ಮರ್ಡರ್ ಗೆ ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ. ಕಲಬುರಗಿ ತಾಲೂಕಿನ ಗೆಳಗುಂಪಾ ಗ್ರಾಮದಲ್ಲಿ ಡಬಲ್ ಮರ್ಡರ್ ಘಟನೆ ನಡೆದಿದೆ. ಅಟ್ಟಾಡಿಸಿಕೊಂಡು ಕೊಡಲಿಯಿಂದ ಕೊಚ್ಚಿ ಇಬ್ಬರನ್ನ ಕೊಲೆ ಮಾಡಲಾಗಿದೆ.

ಕೊಲೆಯಾದ ಶಂಕರ್

40 ವರ್ಷದ ಶಂಕರ್ ಹಾಗೂ 30 ವರ್ಷದ ಅಡೆಮ್ಮ ಕೊಲೆಯಾದವರು. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಶಂಕರ್ ಹಾಗೂ ಅಡೆಮ್ಮ ರೆಡ್ ಹ್ಯಾಂಡ್ ಆಗಿ ಆಕೆಯ ಚಿಕ್ಕಪ್ಪನ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಕೊಡಲಿಯಿಂದ ಮನಬದ್ದಂತೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.

ಕೊಲೆಯಾದ ಅಡೆಮ್ಮ

ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!