ಡ್ರಗ್ಸ್ ಕೇಸ್: ಬಹುಭಾಷಾ ಸ್ಟಾರ್ ನಟಿಗೆ ಟೆನ್ಷನ್ ಶುರು

255

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ಜಾಲದ ನಂಟಿಗೆ ಸಂಬಂಧಿಸಿದಂತೆ ಇಬ್ಬರು ನಟಿಯರ ಬಂಧನವಾಗಿದೆ. ಕೆಲ ನಟ, ನಟಿಯರಿಗೆ ನೋಟಿಸ್ ನೀಡಿ ವಿಚಾರಣೆ ಸಹ ಮಾಡಲಾಗಿದೆ. ಇದರ ಜೊತೆಗೆ ಹಲವು ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಲಾಗಿದೆ.

ಇನ್ನು ರಿಕ್ಕಿ ರೈ ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳಿಗೆ ಮತ್ತೊಂದು ಮಹತ್ವದ ಮಾಹಿತಿ ಸಿಕ್ಕಿದೆಯಂತೆ. ರಿಕ್ಕಿ ರೈ ನೀಡಿರುವ ಮಾಹಿತಿ ಪ್ರಕಾರ, ಬಹುಭಾಷೆಯಲ್ಲಿ ನಟಿಸಿರುವ ನಟಿಗೆ ಸಿಸಿಬಿ ಶಾಕ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

ರಿಕ್ಕಿ ರೈ ಇಂದು ಹೇಳುವ ಮಾಹಿತಿ ಆಧಾರದ ಮೇಲೆ ಬಹುಭಾಷಾ ನಟಿಗೆ ಸಿಸಿಬಿ ನೋಟಿಸ್ ನೀಡಬಹುದು ಎಂದು ಹೇಳಲಾಗ್ತಿದೆ. ಹೀಗಾಗಿ ಆ ಸ್ಟಾರ್ ನಟಿ ಯಾರು ಅನ್ನೋ ಕುತೂಹಲ ಮೂಡಿದಿದೆ.




Leave a Reply

Your email address will not be published. Required fields are marked *

error: Content is protected !!