ಪುಣೆ: ಇಂಡಿಯಾ ಹಾಗೂ ಸೌಥ್ ಆಫ್ರಿಕಾ ನಡುವೆ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ವಿರಾಟ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕನ್ನಡಿಗ ಮಯಾಂಕ ಅಗರ್ವಾಲ್ ಹಾಗೂ ರೋಹಿತ ಶರ್ಮಾ ಆರಂಭಿಕ ಆಟಗಾರರಾಗಿ ಅಂಗಳಕ್ಕೆ ಇಳಿದ್ರು. ಮೊದಲ ಟೆಸ್ಟ್ ನಲ್ಲಿ ಎರಡು ಶತಕ ಸಿಡಿಸಿದ್ದ ರೋಹಿತ ಶರ್ಮಾ, 14 ರನ್ ಗಳಿಸಿ ರಬಡಾಗೆ ವಿಕೆಟ್ ಒಪ್ಪಿಸಿ ಹೋದ್ರು. ನಂತರ ಚೆತೇಶ್ವರ ಪೂಜಾರ ಬಂದಿದ್ದು 1 ರನ್, ಮಯಂಕಾ 26 ರನ್ ಗಳಿಸಿ ಆಡ್ತಿದ್ದಾರೆ. ಮೊದಲ ದಿನದ ಮೊದಲ ಬ್ರೇಕ್ ಗೆ 50ಕ್ಕೆ ಒಂದು ವಿಕೆಟ್ ಆಗಿದೆ.