ಸೌಥ್ ಆಫ್ರಿಕಾ ವಿರುದ್ಧ 2ನೇ ಟೆಸ್ಟ್ ಪಂದ್ಯ: ಟೀಂ ಇಂಡಿಯಾ ಲಿಸ್ಟ್ ಇಲ್ಲಿದೆ

523

ಪುಣೆ: ವಿಶಾಖಪಟ್ಟಣಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳಿಂದ ಭಾರತ ಗೆದ್ದಿತು. ಅದೇ ಜೋಶ್ ನಲ್ಲಿ ಇದೀಗ 2ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿಯಾಗಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗುರುವಾರ 2ನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಅಂಗಳಕ್ಕೆ ಇಳಿಯುವ ಆಟಗಾರರ ಲಿಸ್ಟ್ ಇಲ್ಲಿದೆ.

ರೋಹಿತ ಶರ್ಮಾ, ಮಯಾಂಕ ಅಗರ್ವಾಲ್, ವಿರಾಟ ಕೊಹ್ಲಿ, ಅಜಿಂಕ್ಯೆ ರಹಾನೆ, ಚೇತಶ್ವರ ಪುಜಾರ, ವೃದ್ಧಮಾನ್ ಸಹಾ, ರವೀಂದ್ರ ಜಡೇಜಾ, ಮೊಹ್ಮದ ಶಮಿ, ಆರ್.ಅಶ್ವಿನ್, ಇಶಾಂತ ಶರ್ಮಾ, ಉಮೇಶ ಯಾದವ ಟೀಂ 11ರಲ್ಲಿ ಆಡುವ ಸಂಭಾವ್ಯರ ಪಟ್ಟಿಯಾಗಿದೆ.

ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಡಬಲ್ ಸೆಂಚುರಿ ಬಾರಿಸಿದ ಕನ್ನಡಿಗ ಮಯಾಂಕ ಅಗರ್ವಾಲ್, ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ರೋಹಿತ ಶರ್ಮಾ, ಬೌಲಿಂಗ್ ನಲ್ಲಿ ಮಿಂಚಿದ ರವೀಂದ್ರ ಜಡೇಜಾ, ಆರ್.ಅಶ್ವಿನ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮೊದಲ ಪಂದ್ಯ ಸೋತಿರುವ ಸೌಥ್ ಆಫ್ರಿಕಾ 2ನೇ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಲು ಪ್ಲಾನ್ ಮಾಡ್ತಿದೆ.




Leave a Reply

Your email address will not be published. Required fields are marked *

error: Content is protected !!