ಡ್ರಗ್ಸ್ ಪೆಡ್ಲರ್ ಬಗ್ಗೆ 2018ರಲ್ಲೇ ಸುಳಿವು ಸಿಕ್ಕಿದ್ರೂ ಏನ್ ಮಾಡ್ತಿತ್ತು ಸಿಸಿಬಿ?

319

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮಾದಕ ದಂಧೆಗೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಬಂಧನವಾಗಿದೆ. ಇದಕ್ಕೂ ಮೊದ್ಲು ರಾಗಿಣಿ ಆಪ್ತ ರವಿಶಂಕರ ಹಾಗೂ ನಟಿ ಸಂಜನಾ ಆಪ್ತ ರಾಹುಲನನ್ನ ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ಡ್ರಗ್ಸ್ ಪೆಡ್ಲರ್ ಎಂದು ತಿಳಿದು ಬಂದಿದೆ.

ಈ ಡ್ರಗ್ಸ್ ದಂಧೆಯ ಬಗ್ಗೆ 2018ರಲ್ಲಿ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಇದೆ. ಅಂದು ಸಾಫ್ಟೇರ್ ಎಂಜಿನಿಯರ್ ಆಗಿದ್ದ ಪ್ರತೀಕ ಶೆಟ್ಟಿ ಹಾಗೂ ಇಬ್ಬರು ನೈಜೇರಿಯಾ ಪ್ರಜೆಗಳು ಸಿಕ್ಕಿಬಿದ್ದಿದ್ರು. ಅಲ್ದೇ, 1 ಕೋಟಿ 70 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಸಹ ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ ನವೆಂಬರ್ 2, 2018ರಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಂದು ಚಂದನವನದ 15 ಮಂದಿ ಹೆಸರನ್ನ ಈ ಪ್ರತೀಕ ಶೆಟ್ಟಿ ಬಾಯಿಬಿಟ್ಟಿದ್ದ.

ಡ್ರಗ್ಸ್ ಪೆಡ್ಲರ್ ಪ್ರತೀಕ ಶೆಟ್ಟಿ

ಡ್ರಗ್ಸ್ ಪೆಡ್ಲರ್ ಪ್ರತೀಕ ಶೆಟ್ಟಿ ಅಂದು ಹೇಳಿದ ಹೆಸರುಗಳಲ್ಲಿ ನಟಿ ರಾಗಿಣಿ, ರವಿಶಂಕರ ಸೇರಿ ಚಿತ್ರರಂಗದ 15 ಜನರಿದ್ದು, ಸಾಕ್ಷಿ ಸಿಗದೆ ಯಾರಿಗೂ ನೋಟಿಸ್ ಕೊಟ್ಟಿರಲಿಲ್ಲವೆಂದು ಹೇಳಲಾಗ್ತಿದೆ. ಆದ್ರೆ, ಇದೀಗ ಅದೇ ಎಫ್ಐಆರ್ ಆಧಾರದ ಮೇಲೆ ಇವರನ್ನ ವಶಕ್ಕೆ ಪಡೆಯಲಾಗಿದೆ. ಹಾಗಾದ್ರೆ, ಸಿಸಿಬಿ ಅಧಿಕಾರಿಗಳಿಗೆ ಇವರ ಮೇಲೆ ಅನುಮಾನ ಮೂಡಿರಲಿಲ್ವಾ? ಇವರ ಚಲನವಲನ ಗುರುತಿಸುವಲ್ಲಿ ವಿಫಲರಾಗಿದ್ರಾ? ಅಥವ ಯಾರದೋ ಒತ್ತಡವೇನಾದ್ರು ಇತ್ತಾ ಅನ್ನೋ ಅನುಮಾನ ಮೂಡಿದೆ.

ಕ್ಲರ್ಕ್ ರವಿಶಂಕರ ಜೀವನ ಶೈಲಿ ಅಧಿಕಾರಿಗಳಿಗೆ ಅನುಮಾನ ಬರ್ಲಿಲ್ವಾ?

ತಂದೆ ತೀರಿಕೊಂಡ್ಮೇಲೆ ಅನುಕಂಪದ ಆಧಾರದ ಮೇಲೆ ಆರ್ ಟಿಓ ಕಚೇರಿಯಲ್ಲಿ ಎಸ್ ಡಿಎ ಹುದ್ದೆ (ದ್ವಿತೀಯ ದರ್ಜೆ ಸಹಾಯಕ) ಹೊಂದಿದ್ದ. ಕ್ಲರ್ಕ್ ಆಗಿ ರವಿಶಂಕರ ಸರ್ಕಾರಿ ನೌಕರಿ ಪಡೆಯುತ್ತಾನೆ. ಲ್ಯಾವೆಲ್ಲಿ ರಸ್ತೆಯ ನಿವಾಸಿಯಾಗಿರುವ ಈತ, ತಿಂಗಳಿಗೆ ಸುಮಾರು 30 ಸಾವಿರ ಸಂಬಳ ಪಡೆಯುತ್ತಿದ್ದ. ಇಂತವನು ನಟಿ ರಾಗಿಣಿಗಾಗಿ ದಿನಕ್ಕೆ 1 ಲಕ್ಷ ರೂಪಾಯಿ ಹೇಗೆ ಖರ್ಚು ಮಾಡ್ತಿದ್ದ. ದಿನಕ್ಕೆ 1 ಲಕ್ಷ ಖರ್ಚಾದ್ರು ಏನ್ ಮಾಡ್ತಿದ್ರು? ಇದು ನಿಜವೋ ಸುಳ್ಳೋ ತನಿಖೆಯಿಂದ ಹೊರ ಬರಬೇಕಿದೆ.

ಡ್ರಗ್ಸ್ ಪೆಡ್ಲರ್ ರವಿಶಂಕರ

ಕೋರಮಂಗಲ ಆರ್ ಟಿಓ ಕಚೇರಿಯಲ್ಲಿ ಕೆಲಸ ಮಾಡ್ತಿರುವಾಗ ರವಿಶಂಕರಗೆ ನಟಿ ರಾಗಿಣಿ ಪರಿಚಯವಾಗಿದೆ. ಬಳಿಕ ಸ್ಟಾರ್ ನಟಿಯೊಂದಿಗೆ ಮೋಜು, ಮಸ್ತಿ ಮಾಡಿಕೊಂಡು ಇದ್ದ. ರವಿಶಂಕರ ಮಾರ್ಚ್ 16, 2019ರಂದು ರಿಟ್ಜ್ ಕಾರ್ಲಟನ್ ಹೋಟೆಲ್ ನಲ್ಲಿ ರಾಗಿಣಿ ಜೊತೆ ಊಟಕ್ಕೆ ಹೋಗಿದ್ದಾಗ ನಿರ್ಮಾಪಕ ಶಿವಪ್ರಕಾಶ ಎಂಬುವರ ಜೊತೆ ಗಲಾಟೆ ಮಾಡಿಕೊಂಡಿದ್ದ. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ತಿಂಗಳಿಗೆ 30 ಸಾವಿರ ಸಂಬಳ ಪಡೆಯುವ ಸಿಬ್ಬಂದಿ ಬಗ್ಗೆ ಆರ್ ಟಿಓ ಕಚೇರಿಯ ಮೇಲಾಧಿಕಾರಿಗಳಿಗೆ, ಸಹ ಸಿಬ್ಬಂದಿಯಲ್ಲಿ ಯಾರಿಗೂ ಅನುಮಾನ ಬಂದಿಲ್ವಾ? ಸಂಬಳದ ಜೊತೆಗೆ ಗಿಂಬಳ ಪಡೆಯುತ್ತಿದ್ರೂ ಆತನ ವರ್ತನೆ, ಸ್ಟೈಲ್, ಬಿಂದಾಸ್ ಲೈಫ್ ಗೊತ್ತಾಗಿಲ್ವಾ? ಕೆಲಸಕ್ಕೆ ಯಾವಾಗ ಬರ್ತಿದ್ದ? ಏನ್ ಮಾಡ್ತಿದ್ದ? ಇದೆಲ್ಲವೋ ಸಾಮಾನ್ಯ ಪ್ರಶ್ನೆಯೇ.

ತನ್ನ ಸಿಬ್ಬಂದಿಯ ಜೀವನ ಶೈಲಿಯ ನೋಡಿದ್ರೆ ಸಹಜವಾಗಿ ಸಹದ್ಯೋಗಿಗಳಿಗೆ ಅನುಮಾನ ಬರುತ್ತೆ. ಇಲ್ಲಿ ಇದ್ಯಾವುದು ಆಗಿಲ್ಲಂದ್ರೆ ಹೇಗೆ? 2018ರಲ್ಲಿನ ಡ್ರಗ್ಸ್ ಕೇಸಿನಲ್ಲಿ ಈತನ ಹೆಸರು ಕೇಳಿ ಬಂದಿದೆ. 2019ರಲ್ಲಿ ಹೋಟೆಲ್ ಗಲಾಟೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಿದ್ರೂ ಡ್ರಗ್ಸ್ ಪೆಡ್ಲರ್ ರವಿಶಂಕರ ಮೇಲೆ ನಿನ್ನೆ, ಮೊನ್ನೆಯವರೆಗೂ ಸುಳಿವು ಸಿಕ್ಕಿಲ್ಲಂದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.




Leave a Reply

Your email address will not be published. Required fields are marked *

error: Content is protected !!