ಡ್ರಗ್ಸ್ ವಿರುದ್ಧದ ಹೋರಾಟಗಾರ ಸಂಬರಗಿಯೇ ಡ್ರಗ್ಸ್ ಪೆಡ್ಲರ್ ಜೊತೆ…

1162

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಬಿರುಗಾಳಿ ಎಬ್ಬಿಸಿರುವುದು ಡ್ರಗ್ಸ್ ಕಳ್ಳಾಟ. ಈ ಸಂಬಂಧ ನಟಿ ರಾಗಿಣಿ ಬಂಧನವಾಗಿದೆ. ಇವರ ಆಪ್ತ ರವಿಶಂಕರ ಸಿಸಿಬಿ ವಶದಲ್ಲಿದ್ದಾನೆ. ನಟಿ ಸಂಜನಾ ಆಪ್ತ ರಾಹುಲ ಸಹ ಸಿಸಿಬಿ ಪೊಲೀಸರ ವಶದಲ್ಲಿದ್ದಾನೆ. ಇವರು ಡ್ರಗ್ಸ್ ಪೆಡ್ಲರ್ ಗಳು ಅನ್ನೋದು ಗೊತ್ತಾಗಿದೆ. ನಟಿ ಸಂಜನಾ ಶ್ರೀಲಂಕಾದ ಕ್ಯಾಸಿನೋದಲ್ಲಿರುವ ವಿಡಿಯೋ ಹಂಚಿಕೊಂಡಿರುವ ಸಂಬರಗಿ..

ನಟಿ ಸಂಜನಾ ಆಪ್ತ ರಾಹುಲ ಡ್ರಗ್ಸ್ ಪೆಡ್ಲರ್ ಅನ್ನೋ ಕಾರಣಕ್ಕೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಇದರ ನಡುವೆ ಡ್ರಗ್ಸ್ ಜಾಲದ ವಿರುದ್ಧ ಬಹುದೊಡ್ಡ ಹೋರಾಟ ಮಾಡ್ತಿದ್ದೀನಿ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಸ್ವಯಂ ಆಗಿ ಹೋರಾಟ ಮಾಡ್ತಿದ್ದೀನಿ ಎಂದು ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಪ್ರಶಾಂತ ಸಂಬರಗಿಯೇ ಸ್ವತಃ ಡ್ರಗ್ಸ್ ಪೆಡ್ಲರ್ ರಾಹುಲ ಜೊತೆ ಇರುವ ಫೋಟೋ ವೈರಲ್ ಆಗಿದೆ.

ಹೌದು, ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಆಪ್ತನಾಗಿರುವ ಡ್ರಗ್ಸ್ ಪೆಡ್ಲರ್ ಹಾಗೂ ಇನ್ನೋರ್ವ ಯುವತಿ ಜೊತೆ ಇರುವ ಸಂಬರಗಿ ಫೋಟೋ ಇದೀಗ ಎಲೆಡೆ ಹರಿದಾಡ್ತಿದೆ. ಡ್ರಗ್ಸ್ ವಿರುದ್ಧ ಹೋರಾಡುವ, ಈ ಕರಾಳದಂಧೆ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಳ್ಳುವ, ಎಲ್ಲಿಂದ ಬರುತ್ತೆ, ಹೇಗೆ ಸಪ್ಲೈ ಆಗುತ್ತೆ, ಇದ್ರಿಂದ ದೇಶಕ್ಕೆ ಎಷ್ಟೊಂದು ಅಪಾಯವಿದೆ ಎಂದು ಹೇಳುವ ಪ್ರಶಾಂತ ಸಂಬರಗಿಯೇ ಸ್ವತಃ ಡ್ರಗ್ಸ್ ಪೆಡ್ಲರ್ ಜೊತೆ ಇರುವುದು ಸಾಕಷ್ಟು ಅನುಮಾನ ಮೂಡಿಸಿದ್ದು, ಸಿಸಿಬಿ ಪೊಲೀಸರು ಸಂಬರಗಿಗೂ ನೋಟಿಸ್ ಕಳಿಸಿ ವಿಚಾರಣೆಗೆ ಕರೆಯುತ್ತಾರಾ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!